ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಸ್ಮಶಾನ ಆವರಣ ಗೋಡೆ ನಿರ್ಮಾಣ ಹಾಗೂ ಚಾಪೆಲ್ ಜೀರ್ಣೋದ್ದಾರ ಕಾಮಗಾರಿಯ ಉದ್ಘಾಟನೆಯನ್ನು ಮಾಡಿದ ಶಾಸಕ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ, ಸ್ಮಶಾನ ಆವರಣ ಗೋಡೆ ನಿರ್ಮಾಣ ಹಾಗೂ ಚಾಪೆಲ್ ಜೀರ್ಣೋದ್ದಾರ ಕಾಮಗಾರಿಗೆ ಸರ್ಕಾರದ ವತಿಯಿಂದ 25 ಲಕ್ಷ ಹಾಗೂ ಸಂಸ್ಥೆಯ ವತಿಯಿಂದ 25 ಲಕ್ಷ, ಒಟ್ಟು 50 ಲಕ್ಷದ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಖಣ.ರೆವ್ ಹೇಮಚಂದ್ರ ಕುಮಾರ, ಬಿಶೋಪ್ ಸಿ ಎಸ್ ಐ, ಕೆ ಎಸ್ ಡಿ, ಶೈಲೇಶ್ ಶೆಟ್ಟಿ, ರೆವ್. ವಿಲಿಯಂ ಕುಂದರ್, ರೆವ್. ಎಬ್ನೇಜ್ರ್ ಜಾತನ್ನ, ರೆವ್. ಗಾಬ್ರಿಯಲ್ ರೋನಿತ್, ವರುಣ್ ರಾಜ್ ಅಂಬಟ್, ದಿನೇಶ್, ರಘುವೀರ್ ಎಸ್, ಪ್ರಮೋದ್ ಕೊಟ್ಟಾರಿ, ಮ.ನ.ಪಾ ಸದಸ್ಯರು ಉಪಸ್ಥಿತಿಯಿದ್ದರು..