Friday, January 24, 2025
ಸುದ್ದಿ

“ರೈತರಿಗೆ ಘೋಷಣೆ ಮಾಡಿದ ಭರವಸೆಯನ್ನು ಈಡೇರಿಸದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು” ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು : ರೈತರಿಗೆ ಪ್ರಣಾಳಿಕೆ ಹಾಗೂ ಸರಕಾರದ ಆದೇಶಗಳು ಮರಿಚಿಕೆಗಳಾಗಿದೆ. ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ಶೇ 3 ರ ಬಡ್ಡಿ ದರದಲ್ಲಿ, 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿರುವ ಆದೇಶ ಬಂದು 2 ತಿಂಗಳು ಕಳೆದರೂ ಜಾರಿಯಾಗಿಲ್ಲ, ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಗೆ 5 ರೂಪಾಯಿಂದ 7 ರೂಪಾಯಿಗೆ ಹೆಚ್ಚಳ., ಜಾನುವಾರು ಖರೀದಿಗೆ 3 ಲಕ್ಷದ ಶೂನ್ಯ ಬಡ್ಡಿದರದ ಸಾಲ, ಮೀನುಗಾರ ಮಹಿಳೆಯರಿಗೆ 3 ಲಕ್ಷ ಬಡ್ಡಿ ರಹಿತ ಸಾಲ ಘೋಷಣೆಯಾಗಿಯೇ ಉಳಿದಿದೆ.

ದ.ಕ ಜಿಲ್ಲೆಯಲ್ಲಿ 1,50,000 ರೈತರಿಗೆ ಕೇಂದ್ರ ಸರಕಾರ 6,000 ಕಿಸಾನ್ ಸಮ್ಮಾನ್ ನಿಧಿ ನೀಡುತ್ತಿದ್ದು, ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರ 4,000 ನೀಡುತ್ತಿತ್ತು, ಇದನ್ನು ಈಗಿನ ಸರಕಾರ ನಿಲ್ಲಿಸಿರುತ್ತದೆ. ಬಿಜೆಪಿ ಸರಕಾರ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ದ.ಕ ಜಿಲ್ಲೆಯಲ್ಲಿ ಸುಮಾರು 24,000 ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿ 4,000 ದಿಂದ 11,000 ತನಕ ಈ ಶೈಕ್ಷಣಿಕ ವರ್ಷದಲ್ಲಿ ಯಾವೊಬ್ಬ ರೈತರ ಮಕ್ಕಳಿಗೂ ಪಾವತಿಯಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ರೈತರ ನೀರಾವರಿ ಪಂಪ್ ಸೆಡ್‌ಗಳಿಗೆ ನಿರಂತರ ವಿದ್ಯುತ್ ನೀಡುತ್ತಿದ್ದರೆ., ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ಸರಕಾರ ದಿನದ 7 ಗಂಟೆ ವಿದ್ಯುತ್ ಕೊಡುತ್ತೇನೆ ಎಂದು ಭರವಸೆ ನೀಡಿ ಹಗಲು 3 ಗಂಟೆ ರಾತ್ರಿ 4 ಗಂಟೆ ಭರವಸೆಯೇ ಹೊರತು ರೈತ ಇಂದು ಕತ್ತಲೆಯಲ್ಲಿದ್ದಾನೆ ಎಂದರು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾAಗ್ರೆಸ್ ಸರಕಾರ ರೈತರಿಗೆ ಚಳ್ಳೆ ಹಣ್ಣು ತಿನ್ನಿಸಿ ರೈತರನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ಇವತ್ತು ಕರ್ನಾಟಕದಲ್ಲಿ ರೈತ ವಿರೋಧಿ ಸರಕಾರ ಆಡಳಿತ ಮಾಡುತ್ತಿದ್ದು, ಹಣದುಬ್ಬರ, ಬೆಲೆ ಏರಿಕೆ, ಬರ ಇದರಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ.

ರೈತರಿಗೆ ಘೋಷಣೆ ಮಾಡಿದ ಭರವಸೆಯನ್ನು ಈಡೇರಿಸದೇ ಹೋದರೆ ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬರಬಹುದು ಎಂದು ರಾಜ್ಯಕ್ಕೆ ಎಚ್ಚರಿಕೆಯನ್ನು ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಪ್ರಸಾದ್ ಕೆ.ವಿ., ಉಪಸ್ಥಿತರಿದ್ದರು.