Wednesday, November 27, 2024
ಸುದ್ದಿ

ರಸ್ತೆ ಬದಿಯ ಹೊಟೇಲ್ ಮಾಲೀಕನ ಮನೆಯಲ್ಲಿ 30ಕ್ಕೂ ಹೆಚ್ಚು ಕ್ಯೂಆರ್ ನಲ್ಲಿ ವಹಿವಾಟು, ಏನಿದು ಅಕ್ರಮ – ಕಹಳೆ ನ್ಯೂಸ್

ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚಿಸುತ್ತಿದ್ದ ಹೊಟೇಲ್‌ಗಳ ಮೇಲೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ದಳ ದಾಳಿ ನಡೆಸಿದೆ. ಈ ವೇಳೆ ಒಬ್ಬ ಬಿರಿಯಾನಿ ಹೊಟೇಲ್ ಮಾಲೀಕನ ಮನೆಯಲ್ಲಿ ಬರೋಬ್ಬರಿ ₹ 1.47 ಕೋಟಿ ನಗದು ಪತ್ತೆಯಾಗಿದೆ.


ಇದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದರು ಹೊಟೇಲ್ ಮಾಲೀಕರು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳದೆ ಸರ್ಕಾರಕ್ಕೆ ವಂಚಿಸುತ್ತಿದ್ದರು. ಈ ಬಗ್ಗೆ ಹಲವಾರು ದೂರುಗಳು ಬಂದಿದೆ. ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಜಾಗೃತಿ ವಿಭಾಗದ ತಂಡ ವ್ಯಾಪಾರ ಕೇಂದ್ರಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿತ್ತು.
ಬಹುತೇಕ ಹೋಟೆಲ್ ಮಾಲೀಕರು ತಮ್ಮ ವಹಿವಾಟಿಗೆ ಸಂಬAಧಿಸಿದAತೆ ಯಾವುದೇ ತೆರಿಗೆ ಬಿಲ್ಲು, ಪೂರೈಕೆ ಬಿಲ್ಲನ್ನು ನೀಡುತ್ತಿರಲಿಲ್ಲ. ಲೆಕ್ಕ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದು ಕಂಡುಬoದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಗಂಭೀರವಾಗಿ ಪರಿಗಣಿಸಿದ ಜಾಗೃತ ದಳದ 50 ಅಧಿಕಾರಿಗಳ ವಿಶೇಷ ತಂಡ, ಬಿರಿಯಾನಿ ಮತ್ತು ಮಾಂಸಾಹಾರಿ ಹೋಟೆಲ್ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಬಿರಿಯಾನಿ ಹೋಟೆಲ್ ಮಾಲೀಕನೊಬ್ಬನ ಮನೆಯಲ್ಲಿ ಬರೋಬ್ಬರಿ ₹1.47 ಕೋಟಿ ನಗದು ಪತ್ತೆಯಾಗಿದೆ. ಮತ್ತೊಂದು ಬಿರಿಯಾನಿ ಮಾಲೀಕನ ಮನೆಯಲ್ಲಿಯೂ ಭಾರೀ ನಗದು ಪತ್ತೆಯಾಗಿದೆ.

ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ತೆರಿಗೆ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ವಿಶ್ಲೇಷಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಹಕರಿಂದ ನಗದು ಮತ್ತು ಯುಪಿಎ ಪಾವತಿ ಮೂಲಕ ವರ್ತಕರು ಹಣ ಪಡೆಯುತ್ತಿದ್ದರು. ತೆರಿಗೆ ವಂಚನೆ ಮಾಡುವ ಉದ್ದೇಶಕ್ಕೆ ಯುಪಿಎ ಪಾವತಿ ಖಾತೆಗಳನ್ನೇ ಬದಲಾಯಿಸುವ ಮುಖಾಂತರ ನೈಜ ವಹಿವಾಟನ್ನು ಮುಚ್ಚಿಟ್ಟು ತೆರಿಗೆ ವಂಚಿಸುತ್ತಿದ್ದರು.

ಓರ್ವ ಮಾಲೀಕನ ಬಳಿ 30 ಕ್ಯೂಆರ್ ಕೋಡ್ ಖಾತೆಗಳು ಇರುವುದು ಪತ್ತೆಯಾಗಿದೆ. ಒಂದೇ ಖಾತೆಗೆ ಹಣ ಜಮೆಯಾದರೇ ಆದಾಯ ತೆರಿಗೆ ಇಲಾಖೆ ಮತ್ತು ಆರ್‌ಬಿಐಗೆ ಮಾಹಿತಿ ಹೋಗಲಿದೆ ಎಂಬ ಕಾರಣಕ್ಕೆ ಹಲವು ಯುಪಿಎ ಖಾತೆಗಳನ್ನು ಬಳಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ವ್ಯಾಪಾರಸ್ಥರು, ಪಾಲನೆ ಮಾಡಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಜತೆಗೆ ನಿಗದಿತ ತೆರಿಗೆ ಪಾವತಿಸಿ ಕಾನೂನು ಕಟ್ಟಲೆಗಳಿಂದ ಮುಕ್ತವಾಗಿ ವಹಿವಾಟು ನಡೆಸುವಂತೆ ಹೊಟೇಲ್ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಸಲಹೆ ನೀಡಿದೆ.