Tuesday, January 28, 2025
ಸುದ್ದಿ

ಹೊಸ ಗುಟ್ಕಾ ಜಾಹೀರಾತಿನ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್ – ಕಹಳೆ ನ್ಯೂಸ್

ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಹಾಗೂ ಅಜಯ್ ದೇವಗನ್ ನಟಿಸಿರುವ ವಿಮಲ್ ಪಾನ್ ಮಸಾಲಾ ಜಾಹೀರಾತಿನ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅಕ್ಷಯ್ ಅಭಿಮಾನಿಗಳ ಕ್ಷಮೆ ಯಾಚಿಸಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.


ಕಳೆದ ವರ್ಷ ವಿಮಲ್ ಪಾನ್ ಮಸಾಲ ಜಾಹಿರಾತಿನಲ್ಲಿ ಕಾಣಿಸಿಕೊಂಡ ಬಳಿಕ ಅಕ್ಷಯ್ ಕುಮಾರ್ ಗೆ ಅಭಿಮಾನಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದರು. ಬಳಿಕ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಅಕ್ಷಯ್, ಇನ್ನು ಮುಂದೆ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬ್ರ‍್ಯಾಂಡ್ ನೊಂದಿಗೆ ಒಪ್ಪಂದ ಕಳಚಿಕೊಂಡಿರುವುದಾಗಿಯೂ ತಿಳಿಸಿದ್ದರು.
ಈ ಬಗ್ಗೆ ಟ್ವಿಟ್ಟರ್ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿರುವ ಅಕ್ಷಯ್, ಈ ಜಾಹೀರಾತು 2021 ಅಕ್ಟೋಬರ್ 13ರಲ್ಲಿ ಚಿತ್ರೀಕರಣ ನಡೆಸಿರುವುದು. ವಿಮಲ್‌ನೊಂದಿಗೆ ನಾನು ಒಪ್ಪಂದ ಮುರಿದುಕೊಂಡಿದ್ದೇನೆ. ಬಳಿಕ ಅದರ ಜೊತೆಗೆ ನಾನು ಯಾವುದೇ ಸಂಬAಧ ಹೊಂದಿಲ್ಲ. ಈಗಾಗಲೇ ಚಿತ್ರೀಕರಿಸಿದ ಜಾಹೀರಾತುಗಳನ್ನು 2023ರ ನವೆಂಬರ್ ಅಂತ್ಯದವರೆಗೆ ಬಳಸಿಕೊಳ್ಳುವ ಹಕ್ಕು ಅವರಿಗಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು