Sunday, January 26, 2025
ಸುದ್ದಿ

ಭಾರತ ವಿರೋಧಿ ಪೋಸ್ಟ್ – ಪಾಕ್ ನಿರೂಪಕಿ ಗಡೀಪಾರು – ಕಹಳೆ ನ್ಯೂಸ್

ಭಾರತ ಮತ್ತು ಹಿಂದೂ ವಿರೋಧಿ ಟ್ವೀಟ್ ಮಾಡಿದ ಪಾಕಿಸ್ತಾನದ ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ.


ಸದ್ಯ ಅವರು ದುಬೈ ಯಲ್ಲಿದ್ದು, ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿರುವುದಾಗಿ ತಿಳಿದುಬಂದಿದೆ.
ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಜೈನಾಬ್ ಅಬ್ಬಾಸ್ ವಿರುದ್ಧ ವಕೀಲ ವಿನೀತ್ ಜಿಂದಾಲ್ ಅವರು ದೆಹಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಐಸಿಸಿ ವಿಶ್ವಕಪ್ ನಿರೂಪಕಿ ಸ್ಥಾನದಿಂದ ಅವರನ್ನು ಕೂಡಲೇ ತೆಗೆದುಹಾಕಬೇಕೆಂದು ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಿ ಆದೇಶಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿನೀತ್ ಜಿಂದಾಲ್, ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ಮಾತ್ರ ಅತಿಥಿ ದೇವೋ ಭವ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳನ್ನು ಸ್ವಾಗತಿಸುವುದಿಲ್ಲ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು