Saturday, January 25, 2025
ಸುದ್ದಿ

ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದ ಬೆಳ್ತಂಗಡಿ ಮೂಲದ ಯುವಕ ನಾಪತ್ತೆ – ಕಹಳೆ ನ್ಯೂಸ್

ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲ್ಲೂಕಿನ ಮೂಲದ ಯುವಕನೋರ್ವ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.


ಬೆಳ್ತoಗಡಿ ತಾಲೂಕಿನ ಕೊಯ್ಯುರಿನ ನಿವಾಸಿ ದೀಕ್ಷಿತ್ (27 ವರ್ಷ) ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ ತಾಲೂಕಿನಿಂದ ನಾಲ್ಕು ಯುವಕರ ತಂಡ ದೇವರಮನೆಗೆ ಪ್ರವಾಸಕ್ಕೆ ಬಂದಿದ್ದು ಪ್ರವಾಸ ಮುಗಿಸಿ ಹಿಂದಿರುಗುವಾಗ ಗುಡ್ಡ ತೋಟ ಬಳಿ ಕಾರು ನಿಲ್ಲಿಸಿ ಜಗಳವಾಡಿಕೊಂಡಿದ್ದ ಯುವಕರು, ಮುನಿಸಿಕೊಂಡು ಕಾರು ಹತ್ತದೆ ಹೋದ ಯುವಕ ಕಣ್ಮರೆಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರ ಸಂಜೆ ನಾಪತ್ತೆಯಾಗಿದ್ದು ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು ಇಂದು ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.