Friday, September 20, 2024
ಸುದ್ದಿ

ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ – ಕಹಳೆ ನ್ಯೂಸ್

ದೆಹಲಿ: ಅಮೆರಿಕ ಡಾಲರ್ ಎದುರು ಇಂದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಮತ್ತೆ ಕುಸಿತ ಕಂಡಿದೆ. ಇಂದು ರೂಪಾಯಿ ಮೌಲ್ಯ 24 ಪೈಸೆಗಳಷ್ಟು ಕುಗ್ಗಿದ್ದು, ಇದು ಸಾರ್ವಕಾಲಿಕ ದಾಖಲೆಯ ಕುಸಿತ ಎನಿಸಿದೆ.

ಅನಿಯಂತ್ರಿತ ವಿದೇಶಿ ನಿಧಿಗಳು ಹೊರ ಹರಿಯುವಿಕೆ ಮತ್ತು ದೇಶೀಯ ಷೇರು ಮಾರುಕಟ್ಟೆಯಲ್ಲಿ ತೀವ್ರ ನಷ್ಟದ ನಡುವೆಯೂ ಆಮದುದಾರರಿಂದ ಅಮೆರಿಕ ಕರೆನ್ಸಿ ಬೇಡಿಕೆ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಗುರುವಾರ ಮತ್ತಷ್ಟು ಕುಸಿತ ಕಂಡುಬಂದಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಫೋರೆಕ್ಸ್ ಮಾರುಕಟ್ಟೆಯಲ್ಲಿ, ದೇಶೀಯ ಕರೆನ್ಸಿ ವಹಿವಾಟು 74.37 ರೂ.ಗಳೊಂದಿಗೆ ದುರ್ಬಲವಾಗಿ ಆರಂಭವಾಗಿ ಮತ್ತಷ್ಟು ಇಳಿಕೆಯಾಗಿ 74.45 ರೂ.ಗಳ ಸರ್ವಕಾಸಿಕ ಕುಸಿತ ಕಂಡಿತು. ಇಂದು ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ಮತ್ತೆ 24 ಪೈಸೆಗಳ ಸವಕಳಿಯೊಂದಿಗೆ ಇನ್ನಷ್ಟು ಇಳಿಮುಖವಾಗಿದೆ. ರೂಪಾಯಿ ಮೌಲ್ಯ ಮತ್ತೆ ಕುಸಿತಗೊಂಡಿರುವುದರಿಂದ ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ 1,030 ಪಾಯಿಂಟ್‌ಗಳಿಗೆ ಇಳಿದಿದೆ.