Sunday, November 24, 2024
ಸುದ್ದಿ

ಮೂಡುಬಿದಿರೆ : ಇರುವೈಲು ಪಂಚಾಯತ್‌ನ ಮಾನವೀಯತೆಯ ಕಾರ್ಯಕ್ಕೆ ಶ್ಲಾಘನೆ – ಕಹಳೆ ನ್ಯೂಸ್

ಮೂಡುಬಿದಿರೆ : ಇರುವೈಲು ಗ್ರಾಮದ ಹೊಸಮರಪದವು ನಿವಾಸಿ ದೇವಕಿ ಶೆಟ್ಟಿ ಹಾಗೂ ಅವರ ಮಗ ಸಂಜೀವ ಶೆಟ್ಟಿ ಇವರು ಅನಾರೋಗ್ಯ ಪೀಡಿತರಾಗಿ ಕಳೆದ ಮೂರು ದಿನಗಳಿಂದ ಸ್ವಂತ ದೈನಂದಿನ ಚಟುವಟಿಕೆ ಯನ್ನೂ ಮಾಡಲಾಗದೆ ಮಲಗಿದ್ದಲ್ಲೇ ಎಲ್ಲವನ್ನೂಟ ಮಾಡಿಕೊಳ್ಳುವ ದುಸ್ಥಿತಿಯನ್ನು ಯನ್ನು ಕಂಡು ನೆರೆಹೊರೆಯವರು ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿದ್ದರು.


ಈ ಮಾಹಿತಿಗೆ ಕೂಡಲೇ ಸ್ಪಂದಿಸಿದ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್, ಮಾಜಿ ಅಧ್ಯಕ್ಷ ರಾದ ವಲೇರಿಯನ್ ಕುಟಿನ್ನ ಹಾಗೂ ಸದಸ್ಯರಾದ ನವೀನ್ ಪೂಜಾರಿ ಹಾಗೂ ಮೂಡುಬಿದಿರೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ದ ಸಹಕಾರ ದೊಂದಿಗೆ ದೇವಕಿ ಶೆಟ್ಟಿ ರವರನ್ನು ಮೂಡಬಿದಿರೆಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಅವರ ಮಗ ಸಂಜೀವ ಶೆಟ್ಟಿ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು