Friday, January 24, 2025
ಸುದ್ದಿ

ಸ್ಕೂಟರ್‌ಗೆ ಢಿಕ್ಕಿ ಹೊಡೆದ ಲಾರಿ; ಸ್ಥಳದಲ್ಲೇ ಸ್ಕೂಟರ್‌ ಸವಾರ ಮೃತ್ಯು – ಕಹಳೆ ನ್ಯೂಸ್

ಉಳ್ಳಾಲ : ಮೀನುಗಾರಿಕೆಗೆ ತೆರಳುತ್ತಿದ್ದ ಲಾರಿಯೊಂದು ಏಕಾಏಕಿ ಬ್ರೇಕ್ ಹೊಡೆದು ಹಿಂದೆ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.


ಕೋಟೆಕಾರ್ ಕೊರಗಜ್ಜನ ಕಟ್ಟೆ ಬಳಿ ನಿವಾಸಿ ಅಝ್ವೀನ್(21) ಮೃತ ಯುವಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಝ್ವೀನ್ ಝೊಮೆಟೊ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಕೋಟೆಕಾರಿಂದ ಮಂಗಳೂರಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ನೇತ್ರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೀನುಗಾರಿಕೆಗೆ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಪ್ಲಾಸ್ಟಿಕ್ ಬಾಕ್ಸ್ ರಸ್ತೆಗೆ ಬಿದ್ದಿದ್ದು ಬಾಕ್ಸ್ ಹೆಕ್ಕಲು ಲಾರಿ ಚಾಲಕ ಏಕಾಏಕಿ ಬ್ರೇಕ್ ಹೊಡೆದಿದ್ದಾನೆ.ಪರಿಣಾಮ ಹಿಂದಿನಿAದ ಬಂದ ಸ್ಕೂಟರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಝ್ವೀನ್ ರಸ್ತೆಗೆಸೆಯಲ್ಪಟ್ಟು ಪ್ರಾಣ ಕಳಕೊಂಡಿದ್ದಾನೆ. ಮೃತ ಅಝ್ವೀನ್ ಕುಟುಂಬ ಬಡತನದಲ್ಲಿದ್ದು ಆತನ ತಂದೆ ಹನೀಫ್ ಅವರು ಮನೆಯಲ್ಲಿ ಬಿರಿಯಾನಿ ತಯಾರಿಸಿ ಜೀವನ ನಡೆಸುತ್ತಿದ್ದಾರೆ. ಈ ಸಂಬoಧ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.