Tuesday, January 21, 2025
ಸುದ್ದಿ

ಸರ್ಕಾರಿ ಪ್ರೌಢಶಾಲೆ ಪ್ರಾಂತ್ಯ ಮೂಡುಬಿದಿರೆಯಲ್ಲಿ ಸ್ಕೌಟ್ಸ್ -ಗೈಡ್ಸ್ ದಳದ ವಾರ್ಷಿಕ ಶಿಬಿರ ಸಮಾರೋಪ – ಕಹಳೆ ನ್ಯೂಸ್

ಮೂಡುಬಿದಿರೆ: ಸರ್ಕಾರಿ ಪ್ರೌಢಶಾಲೆ ಪ್ರಾಂತ್ಯ ಮೂಡುಬಿದಿರೆ ಇದರ ತ್ರಿಭುವನ್ ಸ್ಕೌಟ್ಸ್ ಮತ್ತು ರಾಣಿ ಅಬ್ಬಕ್ಕ ಗೈಡ್ಸ್ ದಳದ ವಾರ್ಷಿಕ ಶಿಬಿರ ಮಂಗಳವಾರ ಸಮಾರೋಪಗೊಂಡಿತು.


ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಎಲ್ಲರ ಜತೆ ಹೊಂದಾಣಿಕೆಯನ್ನು ಮಾಡಿಕೊಂಡು ಜೀವನ ಹೇಗೆ ನಡೆಸುವುದು ಎಂಬುದರ ಬಗ್ಗೆ ಶಿಬಿರಗಳು ನಮಗೆ ಕಲಿಸಿಕೊಡುತ್ತವೆ. ವೈವಿದ್ಯತೆಯಲ್ಲಿ ಏಕತೆಯನ್ನು ಕಾಣುತ್ತೇವೆ.ಈ ಶಿಬಿರಗಳು ನಿಮಗೆ ಜೀವನಾನುಭವನ್ನು ನೀಡಿದೆ. ಮುಂದೆಯೂ ಇಂತಹ ಶಿಬಿರದಲ್ಲಿ ಭಾಗವಹಿಸುವಂತಹ ಅವಕಾಶಗಳು ಸಿಕ್ಕಿದಾಗ ಅದನ್ನು ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಅವರು ಸರಕಾರಿ ಶಾಲೆಗಳು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಮಚಂದ್ರ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುರಸಭಾ ಸದಸ್ಯ ಇಕ್ಬಾಲ್ ಕರೀಂ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಗೈಡ್ ಕ್ಯಾಪ್ಟನ್ ಸುಫಲಾ(ಎಲ್.ಟಿ.ಗೈಡ್) ಅವರನ್ನು ಗೌರವಿಸಲಾಯಿತು. ಸೈಟ್ ಗೈಡ್ ಕ್ಯಾಪ್ಟನ್ ಪ್ಲೇವಿ ಡಿಸೋಜ (ಪ್ರೀ ಎ.ಎಲ್.ಟಿ) ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ದಿನ ನಡೆದ ಶಿಬಿರದಲ್ಲಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಾಂತ್ಯ ಪ್ರೌಢಶಾಲಾ ವಠಾರದಲ್ಲಿ ನೆಡಲಾಯಿತು. ಶಿಬಿರಾರ್ಥಿಗಳನ್ನು ಕೊಣಾಜೆಕಲ್ಲಿಗೆ ಟ್ರಕ್ಕಿಂಗ್, ಮಿಜಾರಿನ ಶೋಭಾವನದಲ್ಲಿ ಗಿಡಮೂಲಿಕೆಗಳ ಬಗ್ಗೆ ಮಾಹಿತಿ, ಫಾರ್ಮಸಿಯ ಔಷಧ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಹಿಂದಿನ ಮತ್ತು ಆಧುನಿಕ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಶಿಬಿರದಲ್ಲಿ ಶ್ರಮದಾನ, ಯೋಗ-ಧ್ಯಾನ, ಮನೋರಂಜನ ಆಟಗಳು, ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ, ಸ್ಕೌಟಿಂಗ್ ಇತಿಹಾಸ, ವನ ವಿದ್ಯಾ ಸಂಕೇತ, ಧ್ವಜ ಸ್ತಂಭ ರಚನೆ, ಸರ್ವಧರ್ಮ ಪ್ರಾರ್ಥನೆ, ಶಿಬಿರಾಗ್ನಿಯ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಶಿಕ್ಷಕಿ ವೀಣಾ ಮಲ್ಯ ಸ್ವಾಗತಿಸಿದರು.ಶಿಬಿರದ ನಾಯಕತ್ವ ವಹಿಸಿರುವ ಸ್ಕೌಟ್ ಮಾಸ್ಟರ್ ನವೀನ್ ಚಂದ್ರ ಅಂಬೂರಿ ಶಿಬಿರದ ವರದಿ ವಾಚಿಸಿದರು. ಶಿಬಿರಾರ್ಥಿಗಳಾದ ತಿಲಕ್, ಶ್ರಾವ್ಯ ಹಾಗೂ ಎಸ್ ಡಿ ಎಂ ಉಜಿರೆಯ ರೇಂಜರ್ ಮಲ್ಲಿಕಾ ಅನಿಸಿಕೆಯನ್ನು ಹಂಚಿಕೊoಡರು. ವಿದ್ಯಾರ್ಥಿನಿ ಖತೀಜಾ ಸಿಮಾಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೂಪಾ ಕಿಣಿ ವಂದಿಸಿದರು.