Monday, January 20, 2025
ಸುದ್ದಿ

ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಸುಂಟಿಕೊಪ್ಪದ ಅಂಗನವಾಡಿ ಕಾರ್ಯಕರ್ತೆ ಜಯಂತಿ ಅವರ ಚಿಕಿತ್ಸೆಗೆ ಧನ ಸಹಾಯಕ್ಕಾಗಿ ಮನವಿ – ಕಹಳೆ ನ್ಯೂಸ್

ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದಲ್ಲಿ ವಾಸವಾಗಿರುವ ಅಂಗನವಾಡಿ ಕಾರ್ಯಕರ್ತೆಯವರಾದ ಶ್ರೀಮತಿ ಬಿ.ಕೆ. ಜಯಂತಿ ಅವರು ಗಂಭೀರವಾದ ಖಾಯಿಲೆಯಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಿನವೊಂದರ ಚಿಕಿತ್ಸಾ ವೆಚ್ಚ ರೂ. 90 ಸಾವಿರ ಆಗುತ್ತಿದೆ. ಈಗಾಗಲೇ ಚಿಕಿತ್ಸೆಯ ವೆಚ್ಚವು ಐದು ಲಕ್ಷ ರೂ. ದಾಟಿದ್ದು . ಸಾಲ ಸೋಲ ಮಾಡಿ ಇಷ್ಟು ಮೊತ್ತವನ್ನು ಚಿಕಿತ್ಸೆಗೆ ಭರಿಸಲಾಗಿದೆ.

ಆದರೆ ಇನ್ನೂ ಹಣದ ಅವಶ್ಯಕತೆಯಿರುವುದರಿಂದ ಲಕ್ಷಾಂತರ ರೂಪಾಯಿಯನ್ನು ಹೊಂದಿಸಿಕೊಳ್ಳಲು ಜಯಂತಿರವರ ಕುಟುಂಬ ಅಸಹಾಯಕವಾಗಿ ದಾನಿಗಳ ನೆರವನ್ನು ಕೋರಿದ್ದಾರೆ. ಆದ್ದರಿಂದ ಸಹೃದಯಿಗಳಾದ ತಾವುಗಳು ದಯವಿಟ್ಟು ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ನೀಡುವ ಮೂಲಕ ಇವರ ಚಿಕಿತ್ಸೆಗೆ ನೆರವಾಗುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

NAME :Raksha b. K
A/C No:20411958707
Bank :state Bank of India, banglore
IFSC code:SBIN0004932
Phone pay:7760240982