Monday, January 20, 2025
ಸುದ್ದಿ

ಮಂಗಳೂರು: ಸ್ಕೂಟರ್ ಸವಾರನ ಮೇಲೆ ಸ್ವಿಫ್ಟ್ ಕಾರು ಹರಿದು ; ಸ್ಕೂಟರ್ ಸವಾರ ಮೃತ್ಯು – ಕಹಳೆ ನ್ಯೂಸ್

ಮಂಗಳೂರು : ದ್ವಿಚಕ್ರ ವಾಹನ ಸವಾರನ ಮೇಲೆ ಕಾರು ಹರಿದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಬುಧವಾರ ರಾತ್ರಿ ಕುಂಟಿಕಾನದ ಬಳಿ ನಡೆದಿದೆ.


ಕಾವೂರು ನಿವಾಸಿ ಕೌಶಿಕ್ (21) ಮೃತಪಟ್ಟವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾಸಗಿ ಆಸ್ಪತ್ರೆಯ ಆವರಣದಿಂದ ಹೊರ ಬರುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ಸ್ಕೂಟರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ನೆಲಕ್ಕೆ ಬಿದ್ದ ಅವರ ಮೇಲೆ ಸ್ವಿಫ್ಟ್ ಕಾರು ಹರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಕೌಶಿಕ್ ಅದಾಗಲೇ ಮೃತಪಟ್ತಿದ್ದಾರೆ ಎಂದು ತಿಳಿದುಬಂದಿದೆ.