Monday, January 20, 2025
ಸುದ್ದಿ

ಒಂದು ದಿನಕ್ಕೆ ಬ್ರಿಟಿಷ್ ರಾಯಭಾರಿಯಾದ ಹುಬ್ಬಳ್ಳಿಯ ಯುವತಿ ಸಂಜನಾ – ಕಹಳೆ ನ್ಯೂಸ್

ಬೆಂಗಳೂರು : ಹುಬ್ಬಳ್ಳಿಯ ಸಂಜನಾ ಹಿರೇಮಠ್ ಎಂಬ ಯುವತಿ ಬೆಂಗಳೂರಿನಲ್ಲಿ ಒಂದು ದಿನದ ಮಟ್ಟಿಗೆ ಬ್ರಿಟಿಷ್ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.


ಬುಧವಾರ (ಅ.11) ಅಂತರ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಪ್ರಯುಕ್ತ ಭಾರತದಲ್ಲಿರುವ ಬ್ರಿಟಿಷ್ ರಾಯಭಾರಿ ಕಚೇರಿಯು ‘ಒಂದು ದಿನದ ರಾಯಭಾರಿ’ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 180 ಯುವತಿಯರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಲಂಡನ್ ಸ್ಟಾಕ್ ಎಕ್ಸಚೇಂಜ್ ಗ್ರೂಪ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಜನಾ ಹಿರೇಮಠ್ ಅವರು ವಿಜೇತರಾದರು. ಅವರು ಮಾಧ್ಯಮ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಆಸ್ಟ್ರೇಲಿಯಾದ ಕೌನ್ಸಲ್ ಜನರಲ್ ಹಿಲರಿ ಮ್ಯಾಕ್‌ಗಿಚಿ ಅವರೊಂದಿಗೆ ಬೆಳಗಿನ ಉಪಾಹಾರ ಸವಿದ ಸಂಜನಾ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳ ಕುರಿತು ಹಾಗೂ ಮಹಿಳಾ ನಾಯಕತ್ವ ಕುರಿತು ಅವರೊಂದಿಗೆ ಚರ್ಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು