Recent Posts

Sunday, January 19, 2025
ಸುದ್ದಿ

ಹುಬ್ಬಳ್ಳಿ : ದಲಿತರ ಕಾಲೋನಿಯಲ್ಲಿ ಉಡುಪಿಯ ಪೇಜಾವರ ಶ್ರೀ ಪಾದಯಾತ್ರೆ – ಕಹಳೆ ನ್ಯೂಸ್

ಹುಬ್ಬಳ್ಳಿ: ಭುವನೇಶ್ವರಿ ನಗರದ ದಲಿತರ ಕಾಲೋನಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪಾದಯಾತ್ರೆ ನಡೆಸಿದರು.

ವಿಶ್ವ ಹಿಂದೂ ಪರಿಷತ್, ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು. ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಚಾರಕ ಬಸವರಾಜ್ ಅವರು ಕುಟುಂಬ ಸದಸ್ಯರನ್ನು ಶ್ರೀಗಳಿಗೆ ಪರಿಚಯಿಸಿದರು. ಕಾಲೋನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಸ್ಥಾನದಲ್ಲಿ ಮಾತನಾಡಿದ ಪೇಜಾವರ ಶ್ರೀ, “ನಾವೆಲ್ಲರೂ ಸನಾತನ ಧರ್ಮೀಯರು. ನಮಗೆ ರಾಮ ಆದರ್ಶ ಪುರುಷ. ಶತಮಾನಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಜಗತ್ತೆಲ್ಲ ಸುಖವಾಗಿದೆ ಎಂದರೆ ಇದಕ್ಕೆ ಕಾರಣ ರಾಮ. ರಾವಣ ಕೆಟ್ಟ ಗುಣಗಳ ಸಂಕೇತ. ಸುಖ, ಸಂತೋಷಕ್ಕೆ ರಾಮನ ಆರಾಧನೆ ಮಾಡೋಣ” ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎನ್ನುವುದು ರಾವಣನ ಗುಣ. ಮಕರ ಸಂಕ್ರಮಣದ ನಂತರ ರಾಮಮಂದಿರ ಉದ್ಘಾಟನೆ ಆಗಲಿದೆ. ಪ್ರತಿಯೊಬ್ಬರೂ ಐದು ದೀಪಗಳನ್ನು ಬೆಳಗೋಣ” ಎಂದು ಮನವಿ ಮಾಡಿದರು.