ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ 2023-24ನೇ ಸಾಲಿನ ಎನ್‍ಎಸ್‍ಎಸ್ ನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್
ಉಡುಪಿ : ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇದರ 2023 24ನೇ ಸಾಲಿನ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರ ಸ್ವಚ್ಛ ಪರಿಸರ ಮತ್ತು ಸ್ವಸ್ಥ ಸಮಾಜಕ್ಕಾಗಿ ಯುವ ಜನತೆ ಎಂಬ ದೇವಾಕ್ಯದೊಂದಿಗೆ 7 ದಿನಗಳ ವಿಶೇಷ ಶಿಬಿರವನ್ನು ಅಲೆವೂರು ಗ್ರಾಮದಲ್ಲಿ ಉದ್ಘಾಟಿಸಲಾಯಿತು.
ಶಿಬಿರದ ಉದ್ಘಾಟನೆ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಯತೀಶ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸುವಲ್ಲಿ ಎನ್ ಎನ್ ಎಸ್ ಸಹಕಾರಿ ಎಂದು ನುಡಿದರು.
ಶಿಬಿರದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ನಾಯಕ್ ಮಾತನಾಡಿ ಸಮಾಜ ಸೇವೆ ಸಲ್ಲಿಸಲು ಎನ್ ಎನ್ ಎಸ್ ವಿದ್ಯಾರ್ಥಿಗಳಿಗೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ನುಡಿದರು ಹಾಗೂ ತಮ್ಮ ಬಾಲ್ಯದ ದಿನಗಳನ್ನು ಎನ್ ಎನ್ ಎಸ್ ಸವಿನೆನಪು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಕಾಲೇಜು ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅನಂತ್ ಬಲ್ಲಾಳ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ದಯಾನಂದ್ ಬೆನ್ನೂರ್ ಶಿಬಿರಾರ್ಥಿಗಳಿಗೆ ಶುಭ ಕೋರಿದರು ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೀಲಾಬಾಯಿ ಭಟ್ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು ವೇದಿಕೆಯಲ್ಲಿ ದಿನೇಶ್ ಕಿಣಿ ಶ್ರೀಕೃಷ್ಣಸರ್ ಶ್ರೀಮತಿ ಶಾಂತಿಪೈ ಶ್ರೀಮತಿ ಸುಮನ ಉಪಸ್ಥಿತರಿದ್ದರು.
ಎನ್‍ಎಸ್‍ಎಸ್ ಕಾರ್ಯಕ್ರಮಾ ಅಧಿಕಾರಿಯಾದ ಶ್ರೀ ಪರಮೇಶ್ವರ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು. ಪೆÇಸ ಕರ ಸಮಿತಿ ಅಧ್ಯಕ್ಷರು ಸಂತೋμï ಎಂ ಶೆಟ್ಟಿಗಾರ್, ಪಾಲಕರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ಶ್ರೀ ಲಕ್ಷ್ಮಿಕಾಂತ್ ನಿರೂಪಣೆ ಮಾಡಿದರು ಉಪನ್ಯಾಸಕರಾದ ನಾಗರಾಜ್ ವಂದಿಸಿದರು.