Saturday, September 21, 2024
ಸುದ್ದಿ

ದಿಢೀರ್ ಸಿಕ್ಕಿಂ ಗಡಿಯತ್ತ ತೆರಳಿದ ರಕ್ಷಣಾ ಸಚಿವೆ ! ಯುದ್ಧದ ಮುನ್ಸೂಚನೆ ನಾ ?

ಸಿಕ್ಕಿಂ: ಸಿಕ್ಕಿಂ ಗಡಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವೆ. 

ಡೋಕ್ಲಾಮ್ ನಲ್ಲಿ ಉಂಟಾಗಿದ್ದ ಯುದ್ಧದ ಸ್ಥತಿ ಶಮನದ ಬಳಿಕ ಮತ್ತೊಮ್ಮೆ ಚೀನಾ ತನ್ನ ಬುದ್ಧಿ ತೋರಿಸಲು ವಿವಾದಿತ ಪ್ರದೇಶದ ಸನಿಹದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಸಿಕ್ಕೀಂ-ಭೂತಾನ್-ಟಿಬೆಟ್ ಮೂರು ಸೇರಿರುವ ಗಡಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಲಿದ್ದಾರೆ.
ಸೇನೆಯ ಉಪಮುಖ್ಯಸ್ಥ ಲೆ.ಜ ಶರತ್ ಶರತ್ ಅವರು ಸೀತಾರಾಮನ್‌ರೊಂದಿಗೆ ಇರಲಿದ್ದಾರೆ. ಆ ಸೂಕ್ಷ್ಮ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಎರಡೂ ದೇಶಗಳು ಭಾರೀ ಪ್ರಮಾಣದಲ್ಲಿ ಪಡೆಗಳನ್ನು ನಿಯೋಜಿಸಿವೆ.
ಜೂನ್ 16ರಂದು ಭೂತಾನ್‌ಗೆ ಸೇರಿದ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಚೀನಾ ಪಡೆಗಳನ್ನು ಭಾರತೀಯ ಪಡೆ ತಡೆದು ನಿಲ್ಲಿಸಿತ್ತು.
ಅದರ ನಂತರ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ವಾಕ್ಸಮರ ನಡೆದಿತ್ತು. 73ದಿನಗಳ ಬಳಕಿ ಆಗಸ್ಟ್ 28ರಂದು ಉಭಯ ಪಡೆಗಳೂ ಪರಸ್ಪರ ಒಪ್ಪಂದದ ಮಾತುಕತೆ ಮಾಡಿಕೊಂಡು ಡೋಕ್ಲಾಮ್‌ನಿಂದ ಹಿಂದೆ ಸರಿದಿದ್ದವು.
ಆಗಸ್ಟ್ 28ರ ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿದೆ . ಸದ್ಯದ ಮಟ್ಟಿಗೆ ಡೋಕ್ಲಾಮ್‌ಬಳಿ ಯಾವುದೇ ಪ್ರಚೋದನಾಕಾರಿ ಕ್ರಿಯೆಗಳು ನಡೆಯುತ್ತಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response