Recent Posts

Monday, January 20, 2025
ಸುದ್ದಿ

ಏರ್ ಇಂಡಿಯಾ ವಿಮಾನ ಡಿಕ್ಕಿ: ಅಪಾಯವಿಲ್ಲದೆ ಪಾರಾದ ಪ್ರಯಾಣಿಕರು – ಕಹಳೆ ನ್ಯೂಸ್

ಚೆನ್ನೈ: 136 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನವೊಂದು ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಬಡಿದ ಘಟನೆ ತಮಿಳುನಾಡಿನ ತಿರುಚಿಯಲ್ಲಿ ನಡೆದಿದೆ.

ತಮಿಳುನಾಡಿನ ತಿರುಚಿಯಿಂದ ದುಬೈಗೆ ತೆರಳಬೇಕಿದ್ದ ವಿಮಾನ ಟೇಕಾಫ್ ಆಗುತ್ತಿದ್ದ ಸಮಯದಲ್ಲಿ ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆಗೆ ಆಕಸ್ಮಿಕವಾಗಿ ಡಿಕ್ಕಿಹೊಡೆದಿದೆ. ವಿಮಾನದ ಸಣ್ಣ ಚಕ್ರಗಳು ಗೋಡೆಗೆ ಬಡಿದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲದೆ ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ನಡೆದದ್ದು ಸರಿಸುಮಾರು 1.20 ಗಂಟೆಗೆ ಎಂದು ತಿಳಿದುಬಂದಿದ್ದು ಘಟನೆಯ ನಂತರ ವಿಮಾನವನ್ನು ಮುಂಬೈನಲ್ಲಿ ಇಳಿಸಿ, ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಯಿತು. 136 ಪ್ರಯಾಣಿಕರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಏರ್ ಇಂಡಿಯಾ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.