ಮೂಡುಬಿದಿರೆ : ವಾಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ “ನರೇಗಾ ನಡಿಗೆ ಸುಸ್ಥಿರತೆಯೆಡೆಗೆ ಹಾಗೂ ಮನೆ ಮನೆ ಜಾಥಾ” ಕಾರ್ಯಕ್ರಮಕ್ಕೆ ಚಾಲನೆ- ಕಹಳೆ ನ್ಯೂಸ್
ಮೂಡುಬಿದಿರೆ : ವಾಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024-25 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಹಾಗೂ ಮನೆ ಮನೆ ಜಾಥಾ ಕಾರ್ಯಕ್ರಮಕ್ಕೆ ಅಳಿಯೂರು ಹೈಸ್ಕೂಲ್ ಬಳಿ ಪಂಚಾಯತ್ ಅಧ್ಯಕ್ಷರಾದ ವಿಶಾಲಾಕ್ಷಿ ಅವರು ಚಾಲನೆ ನೀಡಿದರು.
ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೈಸ್ಕೂಲ್ ಬಳಿ ಸೇರಿರುವ ಜನರಿಗೆ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿ ಅನುμÁ್ಠನಕ್ಕೆ ಒಂದು ಸದಾವಕಾಶ, ಕ್ರಿಯಾಯೋಜನೆ ತಯಾರಿ ಕೆಲಸ ನಡೆಯುತ್ತಿದ್ದು, ಕೂಡಲೇ ಅರ್ಜಿ ಸಲ್ಲಿಸಿ ಎಂದು ತಾಲೂಕು ಐಇಸಿ ಸಂಯೋಜಕಿಯವರಾದ ಅನ್ವಯ ಮಾಹಿತಿ ನೀಡಿದರು.
ಮನೆಯಲ್ಲಿ ದಿನನಿತ್ಯದ ಚಟುವಟಿಕೆಗಳಿಂದ ಬರುವ ಕೊಳಚೆ ನೀರನ್ನು ಇಂಗಿಸಲು ನರೇಗಾ ಯೋಜನೆಯಡಿಯಲ್ಲಿ ಬಚ್ಚಲು ಗುಂಡಿ ಮಾಡಿಸಿಕೊಳ್ಳಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಉಗ್ಗಪ್ಪ ಮೂಲ್ಯ ಅವರು ಸಲಹೆ ನೀಡಿದರು.
ಬಳಿಕ ಮನೆ – ಮನೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಹಂಚಲಾಯಿತು. ಸ್ವಚ್ಚತಾ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಗ್ರಾಮದ ಪ್ರತಿ ವಾರ್ಡಿನಲ್ಲಿ ಮಾಹಿತಿ ಪ್ರಚಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಶೇಖರ್, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಪ್ರಿಯಾ, ಸಂದೀಪ್ , ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.