ಕಳೆಂಜ ವಿಷ್ಣುಮೂರ್ತಿ ದೇವಾಲಯದ ಚಿನ್ನ ಕಳವಿಗೆ ಬಿಗ್ ಟ್ವಿಸ್ಟ್ ..!? : ಚಿನ್ನ ಕಳವೆಂದು ದೂರು ಕೊಟ್ಟವರ ಮೇಲೆಯೇ ಅನುಮಾನ..? -ಕಹಳೆ ನ್ಯೂಸ್
ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಲಾದ ಚಿನ್ನಾಭರಣಗಳು ನಾಪತ್ತೆಯಾದ ಪ್ರಕರಣಕ್ಕೆ ಇದೀಗ ಬಿಗ್‌ಟ್ವಿಸ್ಟ್ ಸಿಕ್ಕಿದೆ. ಶ್ರೀ ದೇವರ ಚಿನ್ನಾಭರಣವನ್ನ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದರು ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಚಿನ್ನಾಭರಣ ಅಡಮಾನ ಇಟ್ಟವರು ಕೆಲವರಾದ್ರೆ, ಆಭರಣ ಕಳವಾಗಿದೆ ಎಂದು ದೂರುಕೊಟ್ಟವರಿಗೆ ಈ ವಿಚಾರ ಮೊದಲೇ ತಿಳಿದಿತ್ತಾ ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ವೇಳೆ ಭಕತರೊಬ್ಬರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋಮಾಲೆಯನ್ನು ಶ್ರೀ ದೇವರಿಗೆ ಭಕ್ತಿಯಿಂದ ಸಮರ್ಪಿಸಿದ್ದರು. ದೇವಾಲಯದಲ್ಲಿ ಬ್ರಹ್ಮಕಲಶಾಭಿಷೇಕ ಆದ ಮೇಲೆ ದೇವರ ಚಿನ್ನಾಭರಣ, ದೇವಾಲಯದ ಸೊತ್ತು ಎಲ್ಲವನ್ನ ಭದ್ರವಾಗಿ ಇಡಲಾಗಿತ್ತು. ಆದರೆ ಅಕ್ಟೋಬರ್ 15ರಂದು ದೇವಾಲಯದ ಸೊತ್ತುಗಳ ಪರಿಶೀಲನೆ ನಡೆಸುವಾಗ, ದೇವರ ಚಿನ್ನದ ಸರಗಳು ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ದೇವರ ಜೋಮಾಲೆ ಹಾಗೂ ಎರಡು ಪವನಿನ ಇನ್ನೊಂದು ಚಿನ್ನದ ಸರ ನಾಪತ್ತೆಯಾಗಿತ್ತು. ಈ ಕುರಿತು ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಯವ್ರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರನ್ನ ಕೊಟ್ಟಿದ್ದರು.
ಪೊಲೀಸರಿಗೆ ದೂರು ಕೊಡುವ ಸಂದರ್ಭದಲ್ಲಿ ಚಿನ್ನಾಭರಣ ಕಳವಾಗಿದೆ, ದಾಖಲೆ ಪತ್ರೆಗಳನ್ನ ನಾಶ ಮಾಡಲಾಗಿದೆ. ಈ ಹಿಂದೆ ಯಾರಿಗೂ ಹೇಳದೆ ಟ್ರಸ್ಟ್ ರಚನೆ ಮಾಡಿದವರ ಮೇಲೆ ನಮಗೆ ಅನುಮಾನ ಇದೆ ಎಂದು ಗೋಪಾಲ ಶೆಟ್ಟಿಯವರು ಕೆಲವೊಂದು ವ್ಯಕ್ತಿಗಳ ಹೆಸರನ್ನ ಕೂಡ ಉಲ್ಲೆಖ ಮಾಡಿದ್ದಾರೆ. ದೇವಾಲಯದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಟಸ್ಟ್ ಅಧ್ಯಕ್ಷ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಪಡ್ನೂರು ಗ್ರಾಮದ ಅವಿನಾಶ್ ಜೈನ್ ಪರಂಗಾಜೆ ಹಾಗೂ ಇನ್ನು ಕೆಲವರ ಹೆಸರನ್ನ ಉಲ್ಲೆಖ ಮಾಡಿದ್ದಾರೆ.
ಗೋಪಾಲ ಶೆಟ್ಟಿಯವರು ದೂರು ಕೊಟ್ಟ ಸಂದರ್ಭದಲ್ಲಿ ಉಲ್ಲೇಖ ಮಾಡಿರುವ ರೋಹಿತಾಕ್ಷ ಬಾಣಬೆಟ್ಟು ಇವರು ದೇವರ ಜೋಮಾಲೆಯನ್ನ ಉಪ್ಪಿನಂಗಡಿಯ ಮುತ್ತೂಟ್ ಫಿನಾನ್ಸ್ನಲ್ಲಿ ಅಡಮಾನ ಇಟ್ಟಿದ್ದಾರೆ ಅನ್ನೋ ವಿಚಾರ ಇದೀಗ ಬಯಲಾಗಿದೆ. 2023ರ ಆಗಸ್ಟ್ 29ರಂದು ಮುತ್ತೂಟ್ ಪಿನಾನ್ಸ್ನಲ್ಲಿ ದೇವಿಯ ಬಂಗಾರದ ಜೋ ಮಾಲೆಯನ್ನ ಅಡಮಾನ ಇಟ್ಟು 1ಲಕ್ಷದ 10 ಸಾವಿರ ಹಣವನ್ನ ಪಡೆದುಕೊಂಡಿದ್ದಾರೆ.
ಚಿನ್ನಾಭರಣ ಕಳವಾಗಿದೆ ಎಂದು ದೇವಾಲಯದ ಕಮಿಟಿಯವ್ರು ಪೊಲೀಸ್ ಕಂಪ್ಲೆAಟ್ ಕೊಟ್ಟಿರುವ ವಿಚಾರ ತಿಳಿದು, ಇನ್ನೆನು ನಮ್ಮನ್ನ ಪೊಲೀಸರು ಜಡೀತಾರೆ ಅನ್ನೋವಾಗ ರೋಹಿತಾಕ್ಷ ಬಾಣಬೆಟ್ಟು &ಟೀಂ 2023ರ ಅಕ್ಟೋಬರ್ 16ರಂದು ಚಿನ್ನಭರಣವನ್ನ ಬ್ಯಾಂಕ್‌ನಿAದ ಬಿಡಿಸಿದ್ದಾರೆ. ಇಂದು ಅಂದ್ರೆ 2023ರ ಅಕ್ಟೋಬರ್ 17ರಂದು ಈ ಆಭರಣವನ್ನ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಊರಿನ ಭಕ್ತರೆಲ್ಲ ಸೇರಿ ನೂತನ ಟ್ರಸ್ಟ್ ನಿರ್ಮಾಣ ಮಾಡಿದ್ದು, 2023 ಸೆಪ್ಟೆಂಬರ್ 24 ರಂದು. ಆದ್ರೆ ಈ ಚಿನ್ನ ಕದ್ದು ಬ್ಯಾಂಕ್‌ಗೆ ಹೋಗಿದ್ದು 2023ರ ಆಗಸ್ಟ್ 29 ರಂದು. ಭಕ್ತರೆಲ್ಲ ಸೇರಿ ಹೊಸ ಕಮಿಟಿ ರಚನೆ ಮಾಡುವ ಮೊದಲೇ, ದೇವಿಯ ಚಿನ್ನಾಭರಣ ಬ್ಯಾಂಕ್ ಸೇರಿದೆ. ಹಾಗಾಗಿ ಕಳೆಂಜ ವಿಷ್ಣುಮೂರ್ತಿ ದೇವರ ಚಿನ್ನಾಭರಣ ಕಳವಾಗಿದೆ.. ಹುಡುಕಿಕೊಡಿ, ತಪಿತಸ್ಧರಿಗೆ ಶಿಕ್ಷೆ ಆಗಬೇಕು ಎಂದು ಪೊಲೀಸರಿಗೆ ದೂರನ್ನ ಕೊಟ್ಟಂತಹ ವ್ಯಕ್ತಿಗಳಿಗೆ ಚಿನ್ನಾಭರಣವನ್ನ ಯಾರು ಕದ್ದಿದ್ದಾರೆ ಅನ್ನೋ ವಿಚಾರ ಮೊದಲೇ ತಿಳಿದಿತ್ತು ನ್ನೋ ಪ್ರಶ್ನೆ ಇಲ್ಲಿನ ಭಕ್ತರದ್ದಾಗಿದೆ.
ಇವೆಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸ್ತಾ ಇದ್ದಾರೆ. ಇನ್ನು ಉನ್ನತ ಮಟ್ಟದಲ್ಲಿ ಈ ಬಗ್ಗೆ ತನಿಖೆಯಾಗಬೇಕು ಅನ್ನೊದು ಭಕ್ತರ ಆಗ್ರಹ. ಊರಿನ ಭಕ್ತರಲ್ಲಿ ಇರೋವಂತಹ ಒಂದಷ್ಟು ಗೊಂದಲಕ್ಕೆ ಶ್ರೀ ವಿಷ್ಣು ಮೂರ್ತಿ ದೇವರೆ ತೆರೆ ಎಳೆಯಬೇಕಾಗಿದೆ.