http://dl.dropbox.com/s/411sgflctjdsm6b/Mob_s.jpg
ದೆಹಲಿ: ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೆ ಆಮದು ಶುಲ್ಕವನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದ್ದ ಮುಂದುವರಿದ ಭಾಗವಾಗಿ, ಆಮದಾಗುವ ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಇತರೆ ಎಲೆಕ್ಟ್ರಿಕ್ ಹಾಗೂ ಸಂವಹನ ಉಪಕರಣಗಳ ಸುಂಕ ತೆರಿಗೆ ಮತ್ತಷ್ಟು ಏರಿಸಲು ನಿರ್ಧರಿಸಿದೆ.
ದಿನದಿಂದ ದಿನಕ್ಕೆ ಡಾಲರ್ ಮುಂದೆ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಉಳಿಸಲು ಈ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ಹಣಕಾಸು ಇಲಾಖೆ ಅಧಿಕಾರಿಗಳು, ಸುಂಕ ತೆರಿಗೆ ಏರಿಕೆಯಿಂದ ಅಮೆರಿಕಾ ಹಾಗೂ ಚೀನಾದ ವಸ್ತುಗಳ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಾಲರ್ ಮುಂದೆ ರೂಪಾಯಿ ಅಪಮೌಲ್ಯವಾಗುವುದನ್ನು ತಪ್ಪಿಸಲು ಈ ಮಾರ್ಗ ಸಹಕಾರಿಯಾಗಿಲಿದೆ. ಆದರೆ ಎಷ್ಟು ಸುಂಕ ಹಾಗೂ ಎಂದಿನಿಂದ ಜಾರಿಯಾಗುತ್ತದೆ ಎನ್ನುವ ಮಾಹಿತಿ ಸ್ಪಷ್ಟವಾಗಿಲ್ಲ. ಕೇಂದ್ರದ ಈ ನಿರ್ಧಾರದಿಂದ ಸ್ಯಾಮ್‌ಸಂಗ್, ಸಿಸ್ಕೋ, ಎರಿಕ್ಸನ್, ನೋಕಿಯಾ ಸೇರಿದಂತೆ ಹಲವು ಕಂಪನಿಗೆ ಭಾರಿ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.