Friday, January 24, 2025
ಸುದ್ದಿ

ಹಿರೇಬಂಡಾಡಿಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿರುವ ಕ್ರೀಡಾಮೃತದ ಪೂರ್ವಭಾವಿ ಸಭೆ : ಶಾಸಕ ಅಶೋಕ್ ಕುಮಾರ್ ರೈ ಭಾಗಿ – ಕಹಳೆ ನ್ಯೂಸ್

ಉಪ್ಪಿನಂಗಡಿ: ಓರ್ವ ಶಾಸಕನಾಗಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವ ಜವಾಬ್ದಾರಿ ನನ್ನದಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವವ ನಾನಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಹಿರೇಬಂಡಾಡಿಯ ಸರಕಾರಿ ಪ್ರೌಢಶಾಲೆಯಲ್ಲಿ ಅ.26 ಮತ್ತು 27ರಂದು 2023-24ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕಿಯರ ಹಾಗೂ ಬಾಲಕಿಯರ ಕ್ರೀಡಾಕೂಟ `ಕ್ರೀಡಾಮೃತ’ ನಡೆಯಲಿದ್ದು, ಈ ಕುರಿತಾಗಿ ಶಾಲೆಯಲ್ಲಿ ನಡೆದ ಪೂರ್ವಬಾವಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ, ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನುದಾನಗಳನ್ನು ತಡೆಯುವುದು, ಗ್ರಾಮಗಳ ಅಭಿವೃದ್ಧಿಯನ್ನು ಕಡೆಗಣಿಸುವಂತಹ ದ್ವೇಷ ಪೂರಿತ ರಾಜಕೀಯವನ್ನು ನಾನು ಯಾವತ್ತೂ ಮಾಡಲಾರೆ. ಎಲ್ಲರನ್ನೂ ಒಂದಾಗಿ ಕಾಣುವ ಗುಣ ನನ್ನದಾಗಿದ್ದು, ಇಲ್ಲಿನ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 50 ಲಕ್ಷ ರೂ. ಅನುದಾನವನ್ನು ನೀಡಿದ್ದೇನೆ. ಶಾಲೆಗೆ ಪೀಠೋಪಕರಣಕ್ಕೆಂದು 2 ಲಕ್ಷ ರೂ. ಅನುದಾನವನ್ನು ನೀಡಿದ್ದೇನೆ. ಇಂತಹ ಗ್ರಾಮೀಣ ಭಾಗದಲ್ಲಿ ತಾಲೂಕು ಮಟ್ಟದ ಕ್ರೀಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ರಾಜ್ಯ ಮಟ್ಟದ ಕ್ರೀಡಾಕೂಟ ಕೂಡಾ ಈ ಬಾರಿ ನಮ್ಮ ತಾಲೂಕಿನಲ್ಲೇ ನಡೆಯಲಿದೆ. ಈ ಕ್ರೀಡೆಯ ಮೂಲಕ ಹಲವು ಪ್ರತಿಭೆಗಳು ಹೊರಹೊಮ್ಮಲಿ. ನಮ್ಮ ಶಾಲೆ, ನಮ್ಮ ಊರು ಅನ್ನೋ ಎಂಬ ಭಾವನೆಯೊಂದಿಗೆ ಈ ಕ್ರೀಡಾಕೂಟದ ಯಶಸ್ವಿಗೆ ಎಲ್ಲರೂ ಒಂದಾಗಿ ದುಡಿದಾಗ ಇದು ಯಶಸ್ವಿಯಾಗಲು ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಅಡೆಕ್ಕಲ್, ಗ್ರಾ.ಪಂ. ಸದಸ್ಯರಾದ ಗೀತಾ ದಾಸರಮೂಲೆ, ಹಮ್ಮಬ್ಬ ಶೌಕತ್ ಅಲಿ, ಲಕ್ಷ್ಮೀಶ ನಿಡ್ಡೆಂಕಿ, ಭವಾನಿ ಮುರದಮೇಲು, ಶಾಲಾ ಮುಖ್ಯಗುರು ಹರಿಕಿರಣ್ ಕೆ., ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ. ಉಪಸ್ಥಿತರಿದ್ದರು.
ಸಭೆಯಲ್ಲಿ ಕ್ರೀಡಾಕೂಟದ ಆರ್ಥಿಕ ಸಮಿತಿಯ ಅಧ್ಯಕ್ಷ ರವೀಂದ್ರ ದರ್ಬೆ, ಎಸ್‍ಡಿಎಂಸಿ ಸದಸ್ಯರಾದ ದಯಾನಂದ ಸರೋಳಿ, ಹೇಮಾವತಿ ಶಾಖೆಪುರ, ಜಾನಕಿ ಲಾವತ್ತಡಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ., ಹಿರೇಬಂಡಾಡಿ ಕಾಂಗ್ರೆಸ್ ವಲಯಾಧ್ಯಕ್ಷ ರವೀಂದ್ರ ಪಟಾರ್ತಿ, ಕಾಂಗ್ರೆಸ್ ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಅಶ್ರಫ್ ಬಸ್ತಿಕ್ಕಾರ್, ಕೃಷ್ಣರಾವ್ ಆರ್ತಿಲ, ಸೇಸಪ್ಪ ನೆಕ್ಕಿಲು, ಪ್ರಮುಖರಾದ ಗಂಗಾಧರ ಎಲಿಯ, ಝಕಾರಿಯ ನಾಗನಕೋಡಿ, ಬಾಲಚಂದ್ರ ಗುಂಡ್ಯದೇವಿಪ್ರಸಾದ್ ರೈ ಬೆಳ್ಳಿಪ್ಪಾಡಿ ಉಪಸ್ಥಿತರಿದ್ಧರು. ಎಸ್ ಡಿಎಂಸಿ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳಸ್ವಾಗತಿಸಿ ವಂದಿಸಿದರು.