Friday, January 24, 2025
ಸುದ್ದಿ

ಅಗ್ನಿ ಅವಘಡ ; ಜೀವ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಹಾರಿದ ವ್ಯಕ್ತಿ – ಗಾಯಗೊಂಡು ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಬೆಂಗಳೂರು : ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಶೋರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪ್ರಾಣ ಉಳಿಸಿಕೊಳ್ಳಲು ವ್ಯಕ್ತಿಯೊಬ್ಬರು 4ನೇ ಮಹಡಿಯಿಂದ ಜಿಗಿದಿರುವ ಘಟನೆ ನಡೆದಿದೆ.


ನಾಲ್ಕು ಮಹಡಿಯ ಕಟ್ಟಡದಲ್ಲಿ, ಗ್ರೌಂಡ್ ಮತ್ತು ಮೊದಲ ಮಹಡಿಯಲ್ಲಿ ಕಾರು ಶೋರೂಂ ಇದೆ. ಎರಡು ಮತ್ತು ಮೂರನೇ ಮೂರನೇ ಮಹಡಿಯಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿದ್ದು, ಮಡ್ ಪೈಪ್ ಹುಕ್ಕಾ ಕೆಫೆನಲ್ಲಿ ಧಿಡೀರನೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಓರ್ವ ವ್ಯಕ್ತಿ ಗಿಡದ ಮೇಲೆ ಜಿಗಿದಿದ್ದು, ಗಾಯಗಳಾಗಿದೆ. ಗಾಯಗೊಂಡಿರುವ ವ್ಯಕ್ತಿಯನ್ನು ಕೊರಮಂಗಲದ ಸೈಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು