Friday, January 24, 2025
ಸುದ್ದಿ

ಕೇರ್ಪಡ : ಕೆರೆಗೆ ಬಿದ್ದು ಮಹಿಳೆ ಸಾವು – ಕಹಳೆ ನ್ಯೂಸ್

ಪುತ್ತೂರು : ಮಹಿಳೆಯೋರ್ವರು ಎಡಮಂಗಲ ಗ್ರಾಮದ ಕೇರ್ಪಡ ಸುಂದರ ಗೌಡರ ತೋಟದಲ್ಲಿರುವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.


ಇAದು ಬೆಳಿಗ್ಗೆ ಮನೆಯವರು ತೋಟಕ್ಕೆ ಅಡಿಕೆ ಹೆಕ್ಕಲೆಂದು ಹೋದಾಗ ಮೃತದೇಹ ತೇಲುತ್ತಿರುವುದು ಕಂಡು ಬಂದಿದ್ದು . ಆ ಬಳಿಕ ಊರವರು ಸ್ಥಳಕ್ಕೆ ಆಗಮಿಸಿದ್ದು,ಮೃತರ ಗುರುತು ಪತ್ತೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರನ್ನು ಕೇರ್ಪಡ ದಿ. ಹುಕ್ರ ಎಂಬವರ ಪತ್ನಿ ಗಿರಿಜಾ (50 ವ.) ಎಂದು ಗುರುತಿಸಲಾಗಿದೆ.
ಗಿರಿಜಾ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪುತ್ರ ಲೋಕೇಶ್ ಎಂಬವರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು