Thursday, January 23, 2025
ಸುದ್ದಿ

ಮಠಂತಬೆಟ್ಟು ಮಹಿಷಾಮರ್ದಿನಿ ದೇವರಿಗೆ ನಾಳೆ ಸೇವಾ ರೂಪದಲ್ಲಿ ವಜ್ರದ ನೆಕ್ಲೆಸ್ ಸಮರ್ಪಿಸಲಿರುವ ಶಾಸಕ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಶ್ರೀ ಮಹಿಷಾಮರ್ದಿನಿ ದೇವಸ್ಧಾನ ಮಠಂತಬೆಟ್ಟು ಕೋಡಿಂಬಾಡಿಯಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ಹಾಗೂ ಶ್ರೀ ದೇವರಿಗೆ ವಿಶೇಷ ಪೂಜೆಗಳು ನೆರವೇರುತ್ತಿದೆ. ಅಂತೆಯೇ ರಾತ್ರಿ ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರಕ್ಕೆ ಭಕ್ತರು ಭಕ್ತಿಯಿಂದ ತನುಮನ ಧನದ ಸಹಕಾರವನ್ನ ನೀಡುತ್ತಿದ್ದಾರೆ. ಅಂತೆಯೇ ನಾಳೆ ಮಧ್ಯಾಹ್ನ ಶ್ರೀ ದೇವಿಗೆ ವಿಶೇಷವಾಗಿ

ವಜ್ರದ ನೆಕ್ಲಿಸ್ ನ್ನು ಸೇವಾರೂಪವಾಗಿ ಸಮರ್ಪಿಸಲಾಗುತ್ತಿದೆ.

ಪುತ್ತೂರು ಶಾಸಕರಾಗಿರುವ ಶ್ರೀ ಅಶೋಕ್ ಕುಮಾರ್ ರೈ ಮತ್ತು ಇವರ ಪತ್ನಿ ಶ್ರೀಮತಿ ಸುಮ.ಎ.ರೈ ಹಾಗೂ ಮಕ್ಕಳು ಈ‌ ವಜ್ರಾಭರಣವನ್ನ ಶ್ರೀ ದೇವಿಗೆ ಭಕ್ತಿಯಿಂದ ಸೇವಾ ರೂಪವಾಗಿ ಸಮರ್ಪಿಸಲಿದ್ದಾರೆ.

 

ಮಹಿಷಮರ್ದಿನಿ ದೇವಸ್ದಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ‌‌ ಅಶೋಕ್ ಕುಮಾರ್ ರೈ ಅವರು ದೇವಾಲಯದ ಅಭಿವೃದ್ಧಿಗಾಗಿ ಪ್ರತಿ ಹಂತದಲ್ಲೂ ಸಹಕಾರ ನೀಡುತ್ತಾ ಬಂದಿದ್ದು. ಯಾವುದೇ ಕೆಲಸ ಕಾರ್ಯಕ್ಕೂ ಮುನ್ನ, ತಾಯಿಯ ಪಾದಕಮಲಕ್ಕೆ ಶರಣಾಗುತ್ತಾರೆ.. ಹಲವು ಯಶಸ್ಸುಗಳ‌ ಹಿನ್ನಲೆಯಲ್ಲಿ ಭಕ್ತಿಯಿಂದ ದೇವರಿಗೆ ವಜ್ರದ ನೆಕ್ಲೇಸ್ ಸಮರ್ಪಿಸಲಿದ್ದಾರೆ.