Thursday, January 23, 2025
ಸುದ್ದಿ

ಚಲನಚಿತ್ರ ನಟಿ ರಾಧಿಕಾ ಎಸ್ಟೇಟ್ ನ ಕೂಲಿ ಕೆಲಸದಾಕೆ ನಾಪತ್ತೆ : ದೂರು ದಾಖಲು – ಕಹಳೆ ನ್ಯೂಸ್

ಬಂಟ್ವಾಳ: ಸ್ಟಾರ್, ಚಲನಚಿತ್ರ ನಟಿ ರಾಧಿಕಾ ಅವರ ಮನೆಯಲ್ಲಿ ಕೂಲಿ ಕೆಲಸ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲುಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಕಾಣೆಯಾದ ಮಹಿಳೆ. ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ಚಲನ ಚಿತ್ರ ನಟಿ ರಾಧಿಕ ಅವರ ಎಸ್ಟೇಟ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ನಾಗರತ್ನ ಇದೀಗ ಕಾಣೆಯಾಗಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಅ.13 ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸಕ್ಕೆಹೋಗಿದ್ದು, ಅ ದಿನ ಬೆಳಿಗ್ಗೆ 10.30 ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಚಹಾ ಕುಡಿಯಲು ಹೋದವಳು ಯಾಕೆ ಬಂದಿಲ್ಲ ಎಂದು ಮನೆ ಕಡೆ ಹೋಗಿನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು.
ಮನೆಯಿಂದ ಆಕೆ ಬಟ್ಟೆ , ಆಧಾರ್ ಕಾರ್ಡ್, ನಗದು ಸಹಿತ ಹೋಗಿರುವ ವಿಚಾರ ಗಮನಕ್ಕೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವಳು ಹಿಂದೆ ಗಂಡನಜೊತೆ ಮುನಿಸಿಕೊಂಡು ಧರ್ಮಸ್ಥಳ,ಮಂಗಳೂರು ಕಡೆ ಹೋಗಿ ತಿರುಗಾಡಿಕೊಂಡು ವಾಪಸು ಬರುತ್ತಿದ್ದಳು.ಇದು ಅದೇ ರೀತಿ ಹೋಗಿರಬಹುದು ಅಂದುಕೊಂಡಿದ್ದ ಗಂಡನಿಗೆ ಅ.14.ರಂದು ಮರುದಿನ ಪೋನ್ ಮಾಡಿದ ಅವಳು ನನ್ನನ್ನು ಹುಡುಕಬೇಡಿ ನಾನು ದೂರ ಹೋಗುತ್ತೇನೆಂದು ತಿಳಿಸಿದ್ದಾಳೆ. ಇದೀಗ ಮೊಬೈಲ್ ನಂ.ಸ್ವಿಚ್ ಆಪ್ ಆಗಿದ್ದು, ನಾಪತ್ತೆಯಾಗಿದ್ದಾಳೆ ಎಂದು ಗಂಡ ದೂರು ನೀಡಿದ್ದಾಳೆ. ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿಬಂಟ್ವಾಳ ನಗರ ಪೆÇೀಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.