ಮಂಗಳೂರು: ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಬೆಂಗಳೂರಿನ ಜೋಡಿ ಶವ ರೂಪದಲ್ಲಿ ಪತ್ತೆಯಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ .ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಮೃತರನ್ನು ಲಕ್ಷ್ಮಿ(40) ಮತ್ತು ಬೋರಲಿಂಗಯ್ಯ (45) ಎಂದು ಗುರುತ್ತಿಸಲಾಗಿದ್ದು, ಬೆಂಗಳೂರು ಮೂಲದವರಾಗಿದ್ದಾರೆ.
ನಿನ್ನೆ ಬೆಂಗಳೂರಿನಿAದ ಆಗಮಿಸಿದದ್ದ ಈ ಜೋಡಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಪಣಂಬೂರಿಗೆ ಬಂದು ಸಮುದ್ರಕ್ಕೆ ಧುಮುಕಿದ್ದಾರೆ.
ಸಮುದ್ರಕ್ಕೆ ಹಾರುವ ಮುಂಚೆ ತಮ್ಮ ಮೊಬೈಲ್ ಮತ್ತಿತರ ಸೊತ್ತುಗಳನ್ನು ತೀರದಲ್ಲೇ ಬಿಟ್ಟಿದ್ದರಿಂದ ಪೊಲೀಸರು ಸಂಬAಧಿಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಪಣಂಬೂರು ಪೊಲೀಸರು ಈ ಬಗ್ಗೆ ತನಿಖೆ ನಡಸುತ್ತಿದ್ದಾರೆ