Saturday, September 21, 2024
ಸುದ್ದಿ

ನೀವು ಈಗತಾನೆ ಮದುವೆ ಆಗಿದ್ದಿರೇ.. ಹಾಗಾದರೆ ಮದುವೆ ಪ್ರಮಾಣಪತ್ರ ಪಡೆದುಕೊಳ್ಳುವುದು ಹೇಗೆ..?

ಮದುವೆಯಾದ ವಧು ವರರಿಗೆ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರ ಮದುವೆ ಪ್ರಮಾಣಪತ್ರ ಎಂದು ಹೇಳುತ್ತಾರೆ.

ನಿಮಗೆ ಯಾವ ಯಾವ ಸಂಧರ್ಭಗಳಲ್ಲಿ ಮದುವೆ ಪ್ರಮಾಣಪತ್ರ ಬೇಕಾಗುತ್ತದೆ.
* ಆಸ್ತಿಯ ಉತ್ತರಾಧಿಕಾರಿಯಾಗಲು.
* ಪತಿ ಹಾಗೂ ಪತ್ನಿ ಒಟ್ಟಿಗೆ ವೀಸಾ ಪಡೆಯಲು / ಕೆಲಸದ ಪರವಾನಗಿಯನ್ನು ಪಡೆಯಲು.
* ನಿಮ್ಮ ಮೊದಲ ಹೆಸರು ಬದಲಾಯಿಸಿಕೊಳ್ಳಲು.
* ಮರುಮದುವೆ ಸಂದರ್ಭದಲ್ಲಿ.
* ಸಂಗಾತಿಯಿಂದ ವಿಚ್ಛೇದನ ಪಡೆಯಲು.
* ನಾಮಾಂಕಿತಗೊಂಡ ಪತಿ ಅಥವಾ ಪತ್ನಿ ಜೀವ ವಿಮೆ ರಿಟರ್ನ್ಸ್ ಪಡೆಯಲು.

ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆ ಕಾಯಿದೆಯ ವಿಧಗಳು.
ಇಂಡಿಯಾ (ಜಮ್ಮು ಕಾಶ್ಮೀರ ಹೊರತುಪಡಿಸಿ) ದಲ್ಲಿ, ಮದುವೆ ಕಾಯಿದೆಗಳ ಅಡಿಯಲ್ಲಿ ಮದುವೆ ನೋಂದಣಿ ಮಾಡಲು ಈ ಕೆಳಗೆ ಇರುವಂತಹ ಹಂತಗಳನ್ನು ಉಪಯೋಗಿಸಬೇಕು:

ಜಾಹೀರಾತು

ಭಾಗ 1 – ಭಾರತದಲ್ಲಿ ಮದುವೆಯಾಗಲು ಪಾಲಿಸಲೇಬೇಕಾಗುವಂತಹ ನಿಯಮಗಳು.
ಶಾಸ್ತ್ರೋಕ್ತವಾಗಿ ಮದುವೆ ಮಾಡಲು ಈ ಷರತ್ತುಗಳನ್ನು ಅನುಸರಿಸುವುದು ಅಗತ್ಯ.
ಕಾನೂನಿನ ಪ್ರಕಾರ ಮದುವೆಯಾಗುವುದಕ್ಕೆ ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ವಯಸ್ಸಾಗಿರಬೇಕು.
ಈ ಕಾಯಿದೆಯ ಪ್ರಕಾರ ವ್ಯಕ್ತಿ ನಿರಂತರವಾಗಿ ಬುದ್ಧಿಭ್ರಮಣೆಗೆ ಒಳಗಾಗುತ್ತಿದ್ದರೆ, ಅಂತಹ ಮದುವೆ ಅನೂರ್ಜಿತಗೊಳ್ಳುತ್ತದೆ.
ಮೊದಲನೇ ಪತ್ನಿ ಇದ್ದಾಗಲೇ ಎರಡನೇ ವಿವಾಹ ವಾಗುವಂತಿಲ್ಲ.
2006ರಲ್ಲಿ ಮಹಿಳಾ ಸುರಕ್ಷಣೆಯನ್ನು ಮನಗಂಡ ಸುಪ್ರೀಂಕೋರ್ಟ್ ಮದುವೆ ನೊಂದಣಿಯನ್ನು ಕಡ್ಡಾಯ.

ಭಾಗ 2 – ಮದುವೆ ನೋಂದಣಿಯ ಪ್ರಕ್ರಿಯೆ.
* ಹಿಂದೂ ಮದುವೆ ಕಾಯ್ದೆ ಅಡಿಯಲ್ಲಿ ನೋಂದಾಯಿಸಲು: ಪತಿ ಅಥವಾ ಪತ್ನಿ ವಾಸಿಸಿರುವ ಬಡಾವಣೆಯ ವ್ಯಾಪ್ತಿಗೆ ಬರುವ ಉಪ ನೋಂದಾವಣಾಧಿಕಾರಿ ಕಚೇರಿಗಳಲ್ಲಿ ಅರ್ಜಿ ಪಡೆದುಕೊಳ್ಳಬಹುದು.
* ಪತಿ ಹಾಗೂ ಪತ್ನಿ ಹಸ್ತಾಕ್ಷರ ಸಮೇತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.
* ಆನ್ ಲೈನ್ ಮೂಲಕ ವಿವಾಹ ನೋಂದಣಿ ಮಾಡಿಸುವವರು ಅಗತ್ಯವಿವರಗಳನ್ನು ಭರ್ತಿ ಮಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
* ನೀವು ವಿವರಗಳನ್ನು ಭರ್ತಿ ಮಾಡುವಾಗ, ಆನ್ ಲೈನ್ ಮೂಲಕವೇ ಪ್ರಮಾಣ ಪತ್ರ ಪಡೆಯಲು ಸಮಯಾವಕಾಶ ಕಾಯ್ದಿರಿಸಬಹುದಾಗಿದೆ.
* ಮದುವೆ ಯಾಗಲು ಇಚ್ಚಿಸುವ ವಧು ವರರ ಫೋಟೋ ವನ್ನು ಕಚೇರಿಯ ನೋಟೀಸ್ ಬೋರ್ಡ್ ಮೇಲೆ ಫೋಟೋ ವನ್ನು ಹಾಕಲಾಗುತ್ತದೆ.
* ದಾಖಲೆಗಳು ಸೂಕ್ತವಾಗಿದ್ದು, ನೋಂದಣಿ ದಿನಾಂಕದವರೆಗೂ ಯಾವುದೇ ಕಡೆ(ವರ ಅಥವಾ ವಧು)ಯಿಂದ ಆಕ್ಷೇಪಣೆ ಬಾರದಿದ್ದರೆ ದಂಪತಿಗಳು ಹಾಗೂ ಸಾಕ್ಷಿಗಳ ಸಮೇತ ನಿಗದಿತ ದಿನದಂದು ಹಾಜರಾಗಬೇಕು ಹಾಗೂ ಅಂದೇ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.

ಮದುವೆ ನೋಂದಣಿಗೆ ಅಗತ್ಯವಿರುವ ಡಾಕ್ಯುಮೆಂಟ್ಸ್
* ಕಚೇರಿಯಿಂದ ಪಡೆದ ಅರ್ಜಿಯಲ್ಲಿ ದಂಪತಿಗಳ ಹಸ್ತಾಕ್ಷರ(ಸಹಿ) ಇರಬೇಕು.
* ಮತದಾರರ ಐಡಿ/ ರೇಷನ್ ಕಾರ್ಡ್/ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಜನನ ಪ್ರಮಾಣ ಪತ್ರ/ ಎಸ್ಎಸ್ಎಲ್ ಸಿ ಅಂಕ ಪಟ್ಟಿ.
* 6 ಪಾಸ್ ಪೋರ್ಟ್ ಸೈಜಿನ ಫೋಟೋಗ್ರಾಫ್ ನೀಲಿ ಅಥವಾ ಬಿಳಿ ಹಿನ್ನೆಲೆಯಲ್ಲಿ ತೆಗೆದ ಚಿತ್ರ, 2 ಮದುವೆ ಫೋಟೋಗ್ರಾಫ್ (ಮದುವೆ ಆರತಕ್ಷತೆ ಹಾಗೂ ಮಾಂಗಲ್ಯ ಧಾರಣೆ ವಿಧಿ ವಿಧಾನದ ಚಿತ್ರಗಳು)
* ಮದುವೆಯ ಕರೆಯೋಲೆ
* ಮದುವೆ ಹಾಜರಾಗಿದ್ದ ಯಾವುದೇ ವ್ಯಕ್ತಿ (ವಿಟ್ನೆಸ್) ದಂಪತಿಗಳ ಸಾಕ್ಷಿ ಗಾಗಿ ಅವರ ಪ್ಯಾನ್ ಕಾರ್ಡ್ ಮತ್ತು ನಿವಾಸದ ಪುರಾವೆ ಯನ್ನು ಹೊಂದಿರಬೇಕು.

ಅಪ್ಲಿಕೇಶನ್ ಭರ್ತಿ ಮಾಡುವಾಗ ನಿಗಾವಹಿಸಬೇಕು ಮುನ್ನೆಚ್ಚರಿಕೆಗಳು

* ಫಾರಂ ಭರ್ತಿ ವಿವರಗಳನ್ನು ಮೂರು ಬಾರಿ ಪರಿಶೀಲಿಸಿ.
* ವಧು ಮತ್ತು ವರನ ಹೆಸರುಗಳು ಅವರು ಕೊಡುವ ಧಾಖಲೆ ಗಳ್ಳಲ್ಲಿನ ಹೆಸರಿಗೆ ತಾಳೆ ಮಾಡಿ ನೋಡಲಾಗುತ್ತದೆ. ಒಂದು ವೇಳೆ ಮ್ಯಾಚ್ ಇಲ್ಲದಿದ್ದರೆ, ವೀಸಾ ಮತ್ತು ಇತರ ಪ್ರಮಾಣಪತ್ರಗಳನ್ನು ಪಡೆಯುವ ಸಮಯದಲ್ಲಿ, ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
* ಮದುವೆಯ ಮೊದಲು ಮತ್ತು ನಂತರ ಪತ್ನಿ (ವಧು) ಹೆಸರು ನಮೂದಿಸುವುದನ್ನು ಶಿಫಾರಸು ಮಾಡಲಾಗುತ್ತದೆ. ಮದುವೆಗೆ ಮುಂಚೆ, ಉಪನಾಮ ಸಾಮಾನ್ಯವಾಗಿ ತಂದೆಯ ಕುಟುಂಬಕ್ಕೆ ಸೇರಿದವರಾಗಿದ್ದು ಮದುವೆಯ ನಂತರ, ಗಂಡನ ಕುಟುಂಬದವರ ಉಪನಾಮ ಅಳವಡಿಸಿಕೊಳ್ಳಲಾಗುತ್ತದೆ. ಆದ್ದರಿಂದ ಮದುವೆಗೆ ಮುಂಚಿನ ಮತ್ತು ಮದುವೆಯ ನಂತರದ ಹೆಸರನ್ನು ನಮೂದಿಸಬೇಕು.
* ಏಪ್ರಿಲ್ 22, 2014 ರ ನಂತರ ಮದುವೆ ಪ್ರಮಾಣಪತ್ರವನ್ನು 24 ಘಂಟೆಗಳ ಒಳಗೆ ಪಡೆದುಕೊಳ್ಳಬಹುದು ಇದನ್ನು ತತ್ಕಾಲ ಮದುವೆ ಪ್ರಮಾಣ ಪಾತ್ರ ಎಂದು ಹೇಳಲಾಗುತ್ತದೆ. ಅದರ ಶುಲ್ಕ Rs 10000.

ಭಾಗ 3 – ಮದುವೆ ಪ್ರಮಾಣಪತ್ರ ದಿಂದ ಪಡೆಯಬಹುದಾದ ಲಾಭಗಳು.
* ಪಾಸ್ ಪೋರ್ಟ್ ಗೆ ಅರ್ಜಿ ಹಾಕಿರುವವರು, ಬ್ಯಾಂಕಿನಲ್ಲಿ ಹೊಸದಾಗಿ ಖಾತೆ ಆರಂಭಿಸಲು ಬಯಸುವವರಿಗೆ ಈ ಪ್ರಮಾಣ ಪತ್ರ ಸಹಾಯಾವಾಗುತ್ತದೆ.
ಪತಿ ಹಾಗೂ ಪತ್ನಿ ಒಟ್ಟಿಗೆ ವೀಸಾ ಪಡೆಯಬಹುದು.
* ನಾಮಾಂಕಿತಗೊಂಡ ಪತಿ ಅಥವಾ ಪತ್ನಿ ಜೀವ ವಿಮೆ ರಿಟರ್ನ್ಸ್ ಪಡೆಯಲು, ಬ್ಯಾಂಕ್ ಖಾತೆ ಮೊತ್ತ ವಾಪಸ್ ಪಡೆಯಲು ಮದುವೆ ಪ್ರಮಾಣ ಪತ್ರ ಅಗತ್ಯವಿದೆ.
* ಸಾವಿನ ಸಂದರ್ಭದಲ್ಲಿ, ಮದುವೆ ಪ್ರಮಾಣಪತ್ರ ಸ್ವತ್ತಿನ ಉತ್ತರಾಧಿಕಾರವನ್ನು ಪಡೆಯಲು ಸಹಾಯವಾಗುತ್ತದೆ.
* ಬಾಲ್ಯವಿವಾಹಗಳ ಮೇಲೆನ ಹಿಡಿತವನ್ನು ಪಡೆಯುವಲ್ಲಿ ಮದುವೆ ನೋಂದಣಿ ಪ್ರಕ್ರಿಯೆ ಅಧಿಕಾರಿಗಳಿಗೆ ಸಹಾಯವಾಗುತ್ತದೆ.

Leave a Response