ಮುತ್ತಿನಂತೆ ಝಗಮಗಿಸುತ್ತಿದೆ ಪುತ್ತೂರು : ಪಿಲಿಏಸಕ್ಕೆ ದೀಪಾಲಂಕಾರದಿoದ ಸ್ವಾಗತಿಸುತ್ತಿದೆ ಕಲ್ಲೇಗ ಟೈಗರ್ಸ್ ಟೀಂ – ಕಹಳೆ ನ್ಯೂಸ್
ಮುತ್ತಿನ ನಗರ ಪುತ್ತೂರು ಇದೀಗ ಮುತ್ತಿನಂತೆ ಝಗಮಗಿಸುತ್ತಿದೆ. ಎಲ್ಲಿ ನೋಡಿದರೂ ಬೆಳಕಿನ ಚಿತ್ತಾರ. ವಿದ್ಯುತ್ ದೀಪಗಳ ವೈಯಾರ ನವರಾತ್ರಿಗೆ ವಿಶೇಷ ರಂಗು ಮೂಡಿಸಿದೆ.
ನಗರದ ಕಲ್ಲೇಗ ರಸ್ತೆಯಲ್ಲಂತು ವರ್ಣಮಯ ವಿದ್ಯುತ್ ದೀಪಗಳ ಶೃಂಗಾರ ಸ್ವರ್ಗವನ್ನೆ ಸೃಷ್ಟಿಸಿದಂತಿದೆ. ನಾಳೆ ಟೀಂ ಕಲ್ಲೇಗ ಟೈಗರ್ಸ್ ವತಿಯಿಂದ ನವರಾತ್ರಿ ಪಿಲಿಏಸ ನಡೆಯಲಿದ್ದು ಟೀಂ ಕಲ್ಲೇಗ ಟೈಗರ್ಸ್ ಅದ್ದೂರಿ ಕಾರ್ಯಕ್ರಮಕ್ಕೆ ದೀಪಾಲಂಕಾರದ ಮೂಲಕ ಜನರನ್ನ ವಿಶೇಷವಾಗಿ ಸ್ವಾಗತಿಸುತ್ತಿದೆ. ಹುಲಿಕುಣಿತದ ಸಂಭ್ರಮಕ್ಕೆ ಇಷ್ಟೊಂದು ಅದ್ದೂರಿ ವಿದ್ಯುತ್ ದೀಪದ ಮೆರುಗು ತುಂಬಿರೋದು ಪುತ್ತೂರಿನ ಇತಿಹಾಸದಲ್ಲೆ ಇದು ಪ್ರಪ್ರಥಮವಾಗಿದೆ.
ಕಲ್ಲೇಗ ಟೈಗರ್ಸ್ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇಂದು ರಾತ್ರಿ ಕಲ್ಲೇಗ ಕಲ್ಕುಡ ದೈವಸ್ಧಾನದಲ್ಲಿ ಊದು ಪೂಜೆ ನಡೆದು, ನಾಳೆ ಬೆಳಗ್ಗೆ ಅದ್ದೂರಿಯಾಗಿ ಹುಲಿ ಇಳಿದು, ಪುತ್ತೂರಿನ ಪೇಟೆಯಲ್ಲಿ ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕಲಿದೆ.