Friday, January 24, 2025
ಸುದ್ದಿ

ಬಂಟ್ವಾಳ : ಅಂಗಡಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವು – ಕಹಳೆ ನ್ಯೂಸ್

ಬಂಟ್ವಾಳ: ಅಂಗಡಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ದ್ವಿ ಚಕ್ರ ವಾಹನವೊಂದು ಕಳವಾಗಿರುವ ಘಟನೆ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಸಜಿಪ ಮೂಡ ಗ್ರಾಮ, ಬಂಟ್ವಾಳ ನಿವಾಸಿಯಾದ ಕೃಷ್ಣಪ್ಪ (60) ಎಂಬವರ ಬೈಕ್ ಕಳವಾಗಿದೆ. ಕಳವಾಗಿರುವ ಬೈಕ್ ನ ಅಂದಾಜು ಮೌಲ್ಯ 50 ಸಾವಿರವಾಗಿದೆ.

ಮೆಲ್ಕಾರ್ ಸೂಪರ ಬಜಾರ ಬಳಿ ನಿಲ್ಲಿಸಿದ್ದ (KA-70-H-4363) ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು