Friday, January 24, 2025
ಸುದ್ದಿ

ಸುಳ್ಯ: ಬೈಕಿನಲ್ಲಿ ತೆರಳುತ್ತಿದ್ದಾಗ ಚಕ್ರಕ್ಕೆ ಸಿಲುಕಿದ ಸೀರೆ : ಮಹಿಳೆ ಗಂಭೀರ – ಕಹಳೆ ನ್ಯೂಸ್

ಸುಳ್ಯ: ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ ಚಕ್ರಕ್ಕೆ ಮಹಿಳೆಯೊಬ್ಬರ ಸೀರೆ ಸೆರಗು ಸುತ್ತಿಕೊಂಡ ಪರಿಣಾಮ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನಡೆದಿದೆ.

ಎಲಿಮಲೆ ನಿವಾಸಿ ಶಾಂಭವಿ ಘಟನೆಯಿಂದ ಗಂಭೀರ ಗಾಯಗೊಂಡವರು. ಬೈಕ್ ನಲ್ಲಿ ಹಿಂಬದಿ ಕುಳಿತು ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಅವರ ಸೀರೆ ಬೈಕ್ ಚಕ್ರಕ್ಕೆ ಸುತ್ತಿಕೊಂಡಿದೆ. ಬೈಕ್ ನಿಂದ ಬಿದ್ದ ಅವರನ್ನು ಸ್ಥಳೀಯರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು