Friday, January 24, 2025
ಸುದ್ದಿ

“ಪುತ್ತೂರ್ದ ಪಿಲಿಗೊಬ್ಬು-2023” ಹುಲಿಗಳ ಅಬ್ಬರಕ್ಕೆ ಸಜ್ಜಾದ ಬೃಹತ್ ವೇದಿಕೆ – ಕಹಳೆ ನ್ಯೂಸ್

ಪುತ್ತೂರು : ತುಳುನಾಡಿನ ಧಾರ್ಮಿಕ ಹಿನ್ನೆಲೆಯ ಜಾನಪದ ಕಲೆಯಾದ ಹುಲಿ ಕುಣಿತ, ವರ್ಷಂಪ್ರತಿ ನಡೆಯುವ ಹುಲಿಗಳ ಅಬ್ಬರ ಈ ಬಾರಿ ಮುತ್ತಿನ ನಗರಿ ಪುತ್ತೂರಿನ ವಿಜಯ ಸಾಮ್ರಾಟ್ ಆಶ್ರಯದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜಯ ಸಾಮ್ರಾಟ್ ಆಶ್ರಯದಲ್ಲಿ, ಯುವ ನಾಯಕ ಸಹಜ್ ರೈ ಬಳಜ್ಜ ಅವರ ಸಾರಥ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುವ “ಪುತ್ತೂರ್ದ ಪಿಲಿಗೊಬ್ಬು-2023” ಹಾಗೂ ಫುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಅದ್ಧೂರಿ ವೇದಿಕೆ ಸಜ್ಜಾಗಿದೆ.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ತುಳುನಾಡಿನ ಹೆಸರಾಂತ ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನಟ ನಟಿಯರು ಭಾಗವಹಿಸಲಿದ್ದಾರೆ.