ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್ ಈಗ ಶ್ರೀದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್‍ನಲ್ಲಿ ಬರುತ್ತಿರುವ ಎನ್ ಟಿ ಆರ್ ಬಯೋಪಿಕ್ ಚಿತ್ರದಲ್ಲಿ ಶ್ರೀದೇವಿ ಪಾತ್ರ ಇರಲಿದ್ದು, ಇದಕ್ಕೆ ರಕುಲ್ ಜೀವ ತುಂಬಿದ್ದಾರೆ.
ಇತ್ತೀಚಿಗಷ್ಟೆ ರಕುಲ್ ಅವರ ಜನ್ಮದಿನದಂದು ಸಿನಿಮಾದ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದೀಗ ಅವರು ಆ ಪಾತ್ರಕ್ಕೆ ತೆಗೆದುಕೊಂಡ ಸಂಭಾವನೆ ಬಗ್ಗೆ ಸುದ್ದಿ ಹೊರಬಂದಿದೆ.
ಶ್ರೀ ದೇವಿ ಪಾತ್ರ ಮಾಡಲು ರಕುಲ್ ಬರೋಬ್ಬರಿ 1 ಕೋಟಿ ಹಣ ಪಡೆದರಂತೆ. 1 ಕೋಟಿ ಸಂಭಾವನೆ ರಕುಲ್ ಪ್ರೀತ್ ಸಿಂಗ್‍ಗೆ ಹೊಸತೇನು ಅಲ್ಲ. ಆದರೆ, ಕೇವಲ 20 ನಿಮಿಷದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವ ಆಕ್ಷ್ಯನ್ ಒಂದು ಕೋಟಿ ರೆಮಿನರೇಶನ್ ಪಡೆದಿರೋದು ನಿಜಕ್ಕೂ ಅಚ್ಚರಿಯಾಗಿದೆ.