Friday, January 24, 2025
ಸುದ್ದಿ

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಿಬ್ಬಂದಿ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಸಮಾರಂಭ – ಕಹಳೆ ನ್ಯೂಸ್

ಕಳೆದ 16 ವರ್ಷಗಳಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ವಲಯ ಮೇಲ್ವಿಚಾರಕ ರಾಗಿ ಸೇವೆ ಸಲ್ಲಿಸಿ, ಈ ತಿಂಗಳ 31 ರಂದು ನಿವೃತ್ತ ರಾಗಲಿರುವ ಶ್ರೀ ಬಾಲಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಕಟಪಾಡಿ ಸಹಕಾರಿ ವ್ಯವಾಸಾಯಿಕ ಸಂಘ. (ನಿ)ಕಟಪಾಡಿಯಲ್ಲಿ ನೆರವೇರಿತು.


ಸಮಾರಂಭವು ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಉದ್ಯವಾರ ಅಧ್ಯಕ್ಷತೆಯಲ್ಲಿ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಶೀಲ ಅಭಿನಂದನಾ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಸರೋಜಿನಿ ಶೆಟ್ಟಿ , ನಿರ್ದೇಶಕರಾದ ಹಿಂದುಶೇಖರ್ , ರವಿಕುಮಾರ್, ಕೆ ಮುರಳೀಧರ್ ಪೈ,ಅಶೋಕ್ ರಾವ್, ಯೋಗೀಶ್ ಕೋಟೆ ನಿತಿನ್ ವಿ ಶೇರಿಗಾರ್, ಶಂಕರ್, ಪ್ರಭಾ ಶೆಟ್ಟಿ, ಬ್ಲಾಂಚ್ ಕರ್ನಲಿಯೋ ಮತ್ತು ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು