Thursday, January 23, 2025
ಸುದ್ದಿ

ಬೆಳ್ಳಾರೆ : ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿದ ಕಳ್ಳರು – ಕಹಳೆ ನ್ಯೂಸ್

ಬೆಳ್ಳಾರೆ : ಮಕ್ಕಳು ಹಾಗೂ ಗರ್ಭಿಣಿ ಬಾಣಂತಿಯರಿಗೆ ವಿತರಿಸಲು ಇಟ್ಟಿರುವ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ಕದ್ದೊಯ್ದ ಘಟನೆ ಕೊಡಿಯಾಲ ಗ್ರಾಮದ ಮೂವಪ್ಪೆ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.


ರಾತ್ರಿ ಮೂವಪ್ಪೆ ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿರುವ ಕಳ್ಳರು , ಅಂಗನವಾಡಿಯ ಹಂಚು ತೆಗೆದು ಒಳಹೊಕ್ಕು ತಡಕಾಡಿದ್ದಾರೆ. ಬಳಿಕ ಸುಮಾರು 9,690 ರೂ. ಮೌಲ್ಯದ ಮಕ್ಕಳ ಆಹಾರ ಸಾಮಾಗ್ರಿ ದೋಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮರುದಿನ ಈ ವಿಚಾರ ಗಮನಕ್ಕೆ ಬಂದ ಮೇಲೆ ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಇಲಾಖೆಗೆ ಮಾಹಿತಿ ನೀಡಿ ನಂತರ ಪೊಲೀಸ್ ದೂರು ಸಲ್ಲಿಸಿದ್ದಾರೆ. ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು