Thursday, January 23, 2025
ಸುದ್ದಿ

ನವದೆಹಲಿ ನಂತರ ಮುಂಬೈನಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ; ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬಿಎಂಸಿ – ಕಹಳೆ ನ್ಯೂಸ್

ಮುಂಬೈ: ನವದೆಹಲಿ ವಾಯುಮಾಲಿನ್ಯ ಜಾಗತಿಕವಾಗಿ ಕಳಪೆ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇಲ್ಲಿನ ಗಾಳಿ ಹೆಚ್ಚು ಕಲುಷಿತವಾಗಿದೆ ಎಂದು ಈಗಾಗಲೇ ಹಲವು ವರದಿಗಳಾಗಿದೆ.


ಇದೀಗ ಅದೇ ಸಾಲಿಗೆ ಮುಂಬೈ ಕೂಡ ಸೇರಲು ಸಜ್ಜಾಗಿದೆ. ಈ ಸಂಬAಧ ಎಚ್ಚೆತ್ತಿರುವ ಬೃಹನ್‌ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ಈ ಸಂಬAಧ ಮುನ್ನೆಚ್ಚರಿಕೆವಹಿಸುವಂತೆ ಶುಕ್ರವಾರ ಎಚ್ಚರಿಸಿದೆ. ಅಲ್ಲದೇ ನಗರದ ಜನ ಉಸಿರಾಡಲು ಅನುವಾಗುವಂತೆ ನಿರ್ಮಾಣ ಸ್ಥಳಗಳು, ಕೈಗಾರಿಕೆ ಮತ್ತು ವಾಹನಗಳಿಗೆ ನಿಯಮ ರೂಪಿಸಬೇಕು ಎಂದು ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಈ ಸಂಬAಧ ಸಭೆ ನಡೆಸಿದ್ದು, ಬಿಎಂಸಿ ಆಯುಕ್ತ ಐಎಸ್ ಚಹಾಲ್ ಈ ಆದೇಶವನ್ನು ಹೊರಡಿಸಿದ್ದಾರೆ. ನಗರದ 6,000 ಕಟ್ಟಡ ನಿರ್ಮಾಣ ಸ್ಥಳದಲ್ಲಿ ಧೂಳುಗಳು ಏಳುತ್ತಿದೆ. ಕಟ್ಟು ನಿಟ್ಟಾಗಿ ನಿರ್ವಹಣೆ ಮಾಡಬೇಕು. ಈ ಸಂಬAಧ ನಿಯಮವನ್ನು ರೂಪಿಸಿ, ನಿಯಮ ಉಲ್ಲಂಘಿಸಿದರೆ, ಕೆಲಸವನ್ನೇ ಸ್ಥಗಿತಗೊಳಿಸುವ ನೋಟಿಸ್ ಜಾರಿ ಮಾಡಬೇಕು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎAಎಚ್‌ಎಡಿಎ, ಎಸ್‌ಆರ್‌ಎ, ಎಂಎಸ್‌ಆರ್‌ಡಿಸಿಯ ಎಂಡಿಗಳು, ಎಂಎAಆರ್‌ಸಿಎಲ್, ಎಂಎAಆರ್‌ಡಿಎ ಮೆಟ್ರೋಪಾಲಿಟನ್ ಆಯುಕ್ತರು, ಸಿಆರ್‌ಇಡಿಎಐ, ಎಂಸಿಎಚ್‌ಐ, ಎನ್‌ಎಆರ್‌ಇಡಿಸಿಒ, ಪೇಟಾ ಜೊತೆಗೆ ಎಂಪಿಸಿಬಿ ಮತ್ತು ಬಿಎಂಸಿ ಅಧಿಕಾರಿಗಳು ಮತ್ತು ಸಿಎಂಎ ಪ್ರತಿನಿಧಿಗಳ ತಂಡ ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದರು.
ಕಟ್ಟುನಿಟ್ಟಿನ ಕ್ರಮ: ಯಾವುದೇ ಕಟ್ಟೆ ನಿರ್ಮಾಣ ಸ್ಥಳದಲ್ಲಿ ಅದರ ಸುತ್ತ ಮುತ್ತ 35 ಅಡಿ ಎತ್ತರದ ಕಬ್ಬಿಣದ ಶೀಟ್ ಅನ್ನು ಅಡ್ಡವಾಗಿ ಇಡಬೇಕು. ಒಂದು ಎಕರೆಗಿತಂ ಕಡಿಮೆ ಪ್ರದೇಶದಲ್ಲಿ 25 ಅಡಿ ಎತ್ತರದಲ್ಲಿ ಈ ಶೀಟ್ ಅಳವಡಿಸಬೇಕು. ಕಟ್ಟದ ನಿರ್ಮಾಣದ ಸಂಪೂರ್ಣ ಸ್ಥಳ ಹಸಿರು ಬಟ್ಟೆ ಅಥವಾ ಸೆಣಬಿನ ಶೀಟ್ ಅಥವಾ ಟರ್ಪಲಿನ್‌ಗಳಿಂದ ಮುಚ್ಚಬೇಕು. ಇದರಿಂದ ಯಾವುದೇ ಧೂಳು ಹರಡುವುದಿಲ್ಲ ಎಂದಿದ್ದಾರೆ.

ಎಲ್ಲಾ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಡ್ಡಾಯವಾಗಿ ಸ್ಪ್ರಿಂಕಲ್ ವ್ಯವಸ್ಥೆಯನ್ನು 15 ದಿನ ಅಳವಡಿಸಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವಾಗ ಎಲ್ಲಾ ಸಮಯದಲ್ಲಿ ಈ ನಿಯಮವನ್ನು ಪಾಲಿಸಬೇಕು. ಜೊತೆಗೆ 30 ದಿನಗಳ ಕಾಲ ಹೊಗೆ ವಿರೋಧ ಸಾಧನವನ್ನು ಅಳವಡಿಸಬೇಕು.

ನಗರದ 50ರಿಂದ 60 ಪ್ರಮುಖ ರಸ್ತೆಯಲ್ಲಿ ಆಂಟಿ ಸ್ಮಾಗ್ ವೆಹಿಕಲ್ ಯಂತ್ರಗಳನ್ನು ಬಿಎಂಸಿ ನಿಯೋಜಿಸುತ್ತದೆ. ಎಲ್ಲಾ ನಿರ್ಮಾಣ ಸ್ಥಳಗಳ ಸ್ವತಂತ್ರ ಗಾಳಿಯ ಗುಣಮಟ್ಟವನ್ನು ಅಳೆಯುವ ಸಾಧನಗಳನ್ನು ಸ್ಥಾಪಿಸಬೇಕು. ಇದರ ಸೂಕ್ಷ್ಮ ಮೇಲ್ವಿಚಾರಣೆ ಮಾಡಬೇಕು.

ಮೆಟ್ರೋ, ರಸ್ತೆ ಇಲಾಖೆ ಮತ್ತು ಇತರೆ ಸರ್ಕಾರಿ ಏಜೆನ್ಸಿಗಳನ್ನು ನಡೆಸುವ ಎಲ್ಲಾ ನಿರ್ಮಾಣ ಕಾರ್ಯದಲ್ಲೂ ಸ್ಪ್ರಿಂಕ್ಲರ್ ವ್ಯವಸ್ಥೆ ಮತ್ತು ಆಯಂಟಿ ಸ್ಮಾಗ್ ಗನ್ ಅಳವಡಿಸಬೇಕು. ಕಟ್ಟಡ ಧ್ವಂಸ ಮಾಡುವಾಗಲೂ ಕೂಡ ಧೂಳು ಮೇಲೆ ಏಳದಂತೆ ನೀರಿನ ಸಂಪಡನೆ ಸಾದನವನ್ನು ಅಳವಡಿಸಬೇಕು.

ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕೂಡ ಭಾರೀ ದಂಡ ವಿಧಿಸಬೇಕು. ಜೊತೆಗೆ ಅವರ ನೋಂದಣಿಯನ್ನು ರದ್ದು ಮಾಡಬೇಕು. ಇದಕ್ಕಾಗಿ ವಿಶೇಷ ಸ್ಕ್ವಾಡ್ ವಾಹನದ ಮೇಲ್ವಿಚಾರಣೆ ನಡೆಸಬೇಕು ಎಂಬ ಹಲವು ನಿಯಮಗಳ ಸಲಹೆಯನ್ನು ಸಭೆ ನೀಡಿದ್ದು, ಇವುಗಳ ಕಟ್ಟುನಿಟ್ಟಿನ ಜಾರಿಗೆ ಒತ್ತಾಯಿಸಿದೆ. (ಐಎಎನ್‌ಎಸ್)