Wednesday, January 22, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬೆಂಗಳೂರುರಾಜಕೀಯರಾಜ್ಯ

MLA ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಕುರಿತು ಕಹಳೆ ನ್ಯೂಸ್ ವರದಿ ಪ್ರಕಟವಾಗುತ್ತಿದಂತೆ ‘ ನಾನು ಸೈಲೆಂಟ್ ಆಗೋದಲ್ಲ, ವೈಲೆಂಟ್ ಆಗ್ತೇನೆ ‘ ಎಂದಿದ್ದ ಶೇಖರ್ ಅಲಿಯಾಸ್ ‘ 420 ‘ ರಾಜಶೇಖರ ವಿರುದ್ಧ FIR – ಕಹಳೆ ‌ನ್ಯೂಸ್

ಪುತ್ತೂರು : ಕಳೆದರಡು ವಾರದಿಂದ ಪುತ್ತೂರಿನ ರಾಜಕೀಯದಲ್ಲಿ ಆತಂರಿಕವಾಗಿ ಗುಸು ಗುಸು ಸುದ್ದಿ, ಬಿಸಿ ಬಿಸಿ ಚರ್ಚೆ, ಕೈಕಾರ ನವೀನ್ ರೈ ಪೋಸ್ಟ್ ವ್ಯಾಪಕ ವೈರಲ್ ಆಗಿತ್ತು. ಹೌದು, ಚೈತ್ರಾ ವಂಚನೆ ಪ್ರಕರಣದಂತೆಯೇ ಮತ್ತೊಂದು ಮಹಾವಂಚನೆ ಪ್ರಕರಣ ಪುತ್ತೂರಿನಲ್ಲಿ ಬಯಲಾಗಿತ್ತು, ಪುತ್ತಿಲ ಪರಿವಾರದಲ್ಲಿ ಗುರಿತಿಸಿಕೊಂಡ, ಅರುಣ್ ಕುಮಾರ್ ಪುತ್ತಿಲ ಬೆಂಬಲನೊಬ್ಬ, ಬಿಜೆಪಿ ಟಿಕೆಟ್ ಕೊಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಬಳಸಿಕೊಂಡು ಕೋಟಿ ಕೋಟಿ ವಂಚನೆ ಮಾಡಿದ್ದಾನೆ ಎಂಬ ವರದಿಯನ್ನು, ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ತಮ್ಮ ಫೇಸ್ಬುಕ್ ನ ಫೋಸ್ಟ್ ಹಾಗೂ, ಅದರಲ್ಲಿ ವಂಚನೆಗೊಳಗಾದ ವ್ಯಕ್ತಿ ಮುಖ್ಯಮಂತ್ರಿಗಳಿಗೆ ನೀಡಿದ ದೂರಿನ ಪ್ರತಿಯ ಆಧಾರದಲ್ಲಿ ಕಹಳೆ ನ್ಯೂಸ್ ಸತ್ಯಾಸತ್ಯತೆ ತಿಳಿದು, ವಂಚನೆಗೊಳಗಾದ ವ್ಯಕ್ತಿಯಲ್ಲೇ ಮಾಹಿತಿ ಪಡೆದು ವರದಿ ಬಿತ್ತರ ಮಾಡಿತ್ತು. ಇದೀಗ ಆ ಪ್ರಕರಣದಲ್ಲಿ ಮಾಹಾವಂಚಕ 420 ಶೇಖರ್ ವಿರುದ್ಧ FIR ದಾಖಲಾಗಿದೆ.

ಪುತ್ತೂರು ಮೂಲದ ರಾಜಶೇಖರ್ ಯಾನೆ ಶೇಖರ್ ಎಂಬ ವ್ಯಕ್ತಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಬಂಡಾಯದ ಸಮಯದಲ್ಲಿ ಮುನ್ನಲೆಗೆ ಬಂದು ಮಹಾನಾಯಕನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಪೋಲೀಸ್ ಕಮಿಷನರ್, ಐಜಿ ಡಿಜಿ ಎಂದು ಬಾಯಿ ಬಿಟ್ಟರೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಹೆಸರು ಈ ಶೇಖರ್ ಬಾಯಲ್ಲಿ ಬರುತ್ತಿತ್ತು, ಮತ್ತು ಆ ಸಂದರ್ಭದಲ್ಲಿ ಪುತ್ತಿಲರಿಗೂ ನಾಯಕರು, ಕಾರ್ಯಕರ್ತರ ಅನಿವಾರ್ಯತೆ ಇತ್ತು, ಹೀಗಾಗಿ ಪುತ್ತಿಲ ಟೀಂನ ಪರಮಾಪ್ತ ಬಳಗಕ್ಕೆ ಈ ವ್ಯಕ್ತಿ ಇನ್ ಆದ್ರು, ಅಂದಿನಿಂದ ಪುತ್ತಿಲ ಹೋದಲ್ಲೆಲ್ಲ ರಾಜಶೇಖರ್ ಹಾಜರ್..!! ಫೋಟೋಗೆ ಫೋಸ್ – ಉದ್ದ ಉದ್ದ ಭಾಷಣ. ಉಪಾಧ್ಯಾಯರಂತಹ ಪ್ರಖಾಂಡಪಂಡಿತ ಭಾಷಣಗಾರ ಜೊಗೆಗೂ ರಾಜಶೇಖರ ಸ್ನೇಹಾಚಾರ ಸಂಪಾದಿಸಿದ್ರು, ತನ್ಮೂಲಕ ಸ್ಪಲ್ಪ ಮಟ್ಟಿಗೆ ಜನಪ್ರೀಯತೆನೂ ಪಡೆದಿದ್ದಾರೆ. ಆದರೆ, ಪುತ್ತಿಲ ಪರಿವಾರದ ಘೋಷಣೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ರಾಜಶೇಖರ್ ಅವರನ್ನು ಹೊಗಳಿದ್ದೇ ಹೊಗಳಿದ್ದು, ಆ ಕಾರ್ಯಕ್ರಮಕ್ಕೆ ತಮ್ಮ ಪೋಲೀಸ್ ಇಲಾಖೆಯ ಸ್ನೇಹಿತರ ಸಹಾಯ ಪಡೆದು ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ತರಿಸಿ, ರಾಷ್ಟ್ರೀಯ ನಾಯಕ ಕಾರ್ಯಕ್ರಮಕ್ಕೇನು ಕಮ್ಮಿ ಇಲ್ಲ, ಎಂಬಂತೆ ಶೋ ಆಫ್ ಮಾಡಿಸಿದ್ದು, ಇದೇ ಇದೇ ರಾಜಶೇಖರ್ ಎನ್ನುವುದು ಗಮನಾರ್ಹ ಅಂಶವಾದೆ ಎಂದು ಅಂದೂ ಕಹಳೆ ವರದಿ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿದು ವಂಚನೆ ಪ್ರಕರಣ ..!!?

ಜಾಹೀರಾತು
ಜಾಹೀರಾತು
ಜಾಹೀರಾತು

ಸಿ. ಶಿವಮೂರ್ತಿ ಎಂಬ ವ್ಯಕ್ತಿಗೆ ಬಿಜೆಪಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ, ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.50 ಕೋಟಿ ರೂಪಾಯಿ ವಂಚನೆ ಮಾಡಿದ ಬಗ್ಗೆ ವಿಜಯನಗರ ಪೋಲೀಸರಿಗೆ ಈಗ ದೂರು ನೀಡಿದ್ದಾರೆ. ಹಾಗೂ ಬೆಂಗಳೂರಿನ‌ಲ್ಲಿ ಪೋಲೀಸ್ ಮಹಾನಿರ್ದೇಶಕರು, ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ.

ಸಿದ್ದಲಿಂಗಪ್ಪ ಎಂಬ ವ್ಯಕ್ತಿಗೆ ವಿಜಯನಗರ ಜಿಲ್ಲೆಯ ಹರಿಗಬೊಮ್ಮನ ಹಳ್ಳಿಯ ಎಂಬ‌ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂ. ಎಲ್. ಎ. ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಪುತ್ತೂರು ಮೂಲದ ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಸುಮಾರು ಒಟ್ಟು 2.55 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ, ಹಾಗೂ ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿಸಿದರ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಇದೀಗ ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ IPC 1860 ( U/s, 420, 506, 34 ) ಅಡಿ 19/10/2023 ರಂದು ಪ್ರಕರಣ ದಾಖಲಾಗಿದೆ.‌ ಇಂದು ಅಂದರೆ 21 /10/2023 ರಂದು ವಂಚನೆಗೊಳಗಾದ ಶಿವಮೂರ್ತಿಯವರು ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ. ಇದನ್ನು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿ.ಸಿ.ಬಿ‌. ತನಿಖೆ ನಡೆಸಿ, ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.

ಕಹಳೆ ನ್ಯೂಸ್ ಬಗ್ಗೆ ದೂರು :

ಈ ಕುರಿತು ಕೆಲವು ದಿನಗಳ ಹಿಂದೆ ವಸ್ತುನಿಷ್ಠ ವರದಿ ಮಾಡಿದ ಕಹಳೆ ನ್ಯೂಸ್ ವಾಹಿನಿ ವಿರುದ್ಧ ಪುತ್ತೂರು ಪೋಲೀಸ್ ಠಾಣೆಯಲ್ಲಿ ಇದೇ 420 ಶೇಖರ ಅಲಿಯಾಸ್ ರಾಜಶೇಖರ್ ಸುಳ್ಳು ದೂರು ನೀಡಿದ್ದು, ನಂತರ ಪುತ್ತೂರಿನ ಖಾಸಗೀ ಯೂಟ್ಯೂಬ್ ವಾಹಿನಿಯೊಂದರಲ್ಲಿ ನಾನು ಸೈಲೆಂಟ್ ಆಗಲ್ಲ ವೈಲೆಂಟ್ ಆಗ್ತೇನೆ ಎಂದು ಇತನ ಬಗ್ಗೆ ವರದಿ ಮಾಡಿದ ಕಹಳೆ ವಾಹಿನಿ, ಖಾಸಗೀ ಪತ್ರಿಕೆ ಹಾಗೂ ನವೀನ್ ರೈ ಕೈಕಾರರಿಗೆ ಪೋಲೀಸ್ ಠಾಣೆಯ ಮುಂಭಾಗದಲ್ಲೇ ಬಹಿರಂಗವಾಗಿ ಜೀವ ಬೆದರಿಕೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಹರಣಗೊಳಿಸಿದ್ದಾನೆ. ಈತನ ವಿರುದ್ಧ ಇದೀಗ ನವೀನ್ ರೈ ಕೈಕ್ಕಾರ ದೂರು ನೀಡುವುದಾಗಿ ಹೇಳಿದ್ದಾರೆ.