Wednesday, January 22, 2025
ಸುದ್ದಿ

ಮೂಡುಬಿದಿರೆ: ತಗಡು ಸೀಟಿನ ಮನೆಯಲ್ಲಿ ಜೀವಿಸುತ್ತಿದ್ದ ಬಡ ಮಹಿಳೆಯ ಕುಟುಂಬಕ್ಕೆ ಸರ್ವೋಯದ ಫ್ರೆಂಡ್ಸ್ ನಿಂದ ಸೂರು ಹಸ್ತಾಂತರ – ಕಹಳೆ ನ್ಯೂಸ್

ಮೂಡುಬಿದಿರೆ: ತನ್ನಿಬ್ಬರು ಮಕ್ಕಳೊಂದಿಗೆ ತಗಡು ಸೀಟಿನ ಮನೆಯಲ್ಲಿ ಜೀವಿಸುತ್ತಿದ್ದ ಬಡ ಮಹಿಳೆಯ ಕುಟುಂಬಕ್ಕೆ ಸರ್ವೋದಯ ಫ್ರೆಂಡ್ಸ್ (ರಿ) ಬೆದ್ರ ಇವರು ಸುಸಜ್ಜಿತ ಸೂರೊಂದನ್ನು ನಿರ್ಮಿಸಿದ್ದು ಇದರ ಹಸ್ತಾಂತರ ಕಾರ್ಯಕ್ರಮವು ನಡೆಯಲಿದೆ.

ಪಡುಮಾರ್ನಾಡು ಗ್ರಾ.ಪಂ.ವ್ಯಾಪ್ತಿಯ ಅಮನಬೆಟ್ಟು ಬಳಿಯ ಸುಮಾ ಎಂಬವರು ಮಣ್ಣಿನ ಗೋಡೆ ಮತ್ತು ತಗಡು ಶೀಟ್ ಹೊದಿಸಿದ ಮನೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತೀರಾ ಬಡವರಾಗಿರುವ ಸುಮಾ ಅವರು ಜೀವನೋಪಾಯಕ್ಕಾಗಿ ಬೀಡಿ ಕಟ್ಟಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು ಸ್ವಂತ ಮನೆ ನಿರ್ಮಿಸಲು ಅಸಹಾಯಕರಾಗಿದ್ದರು.

ಇವರ ಈ ಸ್ಥಿತಿಯನ್ನು ಅಮನಬೆಟ್ಟುವಿನ ಅಂಗನವಾಡಿ ಶಿಕ್ಷಕಿ ಶಾಹಿನ್ ಅವರು ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು
ದೇವಾಡಿಗ ಅವರ ಗಮನಕ್ಕೆ ತಂದಿದ್ದು, ಗುರು ಅವರು ತಕ್ಷಣ ಕಾರ್ಯಪ್ರವೃತರಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಬಾರಿಯ ಗಣೇಶೋತ್ಸವದ ಸಂದರ್ಭದಲ್ಲಿ ಸರ್ವೋದಯ ಫ್ರೆಂಡ್ಸ್ ಹುಲಿವೇಷ ಕುಣಿತವನ್ನು ಆಯೋಜಿಸಿದ್ದು ಅದರಲ್ಲಿ ಸಂಗ್ರಹವಾಗಿರುವ ಹಣ ಮತ್ತು ಸಮಿತಿಯ ಸದಸ್ಯರ ವೈಯಕ್ತಿಕ ಹಣವನ್ನು ಒಟ್ಟುಗೂಡಿಸಿ ರೂ 7 ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದ್ದು ಇದರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಬಡ ಕುಟುಂಬವೊಂದಕ್ಕೆ “ಸರ್ವೋಯದ ನಿಲಯ” ಎಂಬ ಹೆಸರಿನೊಂದಿಗೆ ಸೂರನ್ನು ನಿರ್ಮಿಸಿ ಬಡವರ ಪಾಲಿನ ಆಪತ್ಪಾಂಧವವಾಗಿ ಗುರುತಿಸಿಕೊಂಡಿರುವ ಸರ್ವೋದಯ ಫ್ರೆಂಡ್ಸ್ ನ ಕಾರ್ಯವೈಖರಿಗೆ ಮೂಡುಬಿದಿರೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.