Thursday, January 23, 2025
ಸುದ್ದಿ

ಅಕ್ರಮ‌ ಗೋ ಸಾಗಾಟ ಪ್ರಕರಣ-ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂ.ಜಾ.ವೇ ಮನವಿ – ಕಹಳೆ ನ್ಯೂಸ್

ಮೂಡಬಿದಿರೆ : ಅಕ್ರಮ ಗೋ ಸಾಗಾಟದ ಬಗ್ಗೆ ಶೀಘ್ರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮೂಡಬಿದಿರೆ ತಾಲೂಕು ವತಿಯಿಂದ ಮೂಡಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮೂಡಬಿದಿರೆ ಪ್ರದೇಶದಲ್ಲಿ ಹಟ್ಟಿಯಿಂದಲೇ ಜಾನುವಾರುಗಳನ್ನು ಕದ್ದು ಅಕ್ರಮ ಗೋಸಾಗಾಟ ಮಾಡಲಾಗುತ್ತಿದೆ. ಹಾಗೆಯೇ ಜಾನುವಾರುಗಳನ್ನು ಕಸಾಯಿಖಾನೆಯಲ್ಲಿ ವಧಿಸಲಾಗುತ್ತಿದೆ ಈ ಬಗ್ಗೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಇಲ್ಲವಾದಲ್ಲಿ ಹಿಂದೂ ಸಮಾಜವೇ ಇದನ್ನು ತಡೆಯಲು ರಸ್ತೆಗಿಳಿಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತಿಗೆ ಪದವಿನಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು 40ಕ್ಕೂ ಅಧಿಕ ಗೋವುಗಳು ಕಳವಾಗಿದೆ ಹಾಗೂ ಮೂಡಬಿದ್ರೆ ಪ್ರದೇಶದ ಪ್ರತೀ ಗ್ರಾಮದ ವ್ಯಾಪ್ತಿಯಲ್ಲಿಯೂ ಗೋವುಗಳು ಕಳವು ಆಗಿರುವ ವಿಚಾರವು ಸಂಘಟನೆಯ ಗಮನಕ್ಕೆ ಬಂದಿರುತ್ತದೆ.

ಗೋವುಗಳ ನಿರಂತರ ಕಳ್ಳಸಾಗಾಟನೆಯಿಂದಾಗಿ ಕೃಷಿಕರು ಗಾಬರಿಗೊಂಡಿದ್ದು, ಕೃಷಿಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಕೃಷಿಕರಿಗೆ ಗೋವುಗಳ ಕಳ್ಳಸಾಗಾಟನೆಯಿಂದ ಅವರ ಬದುಕೇ ನಾಶ ಆಗುವ ಹಂತಕ್ಕೆ ಬಂದಿರುತ್ತದೆ. ಅನೇಕ ಕೃಷಿಕರು ಹೈನುಗಾರಿಕೆ ಮಾಡುವ ಉದ್ದೇಶಕ್ಕೋಸ್ಕರ ಸಾಲ ಮಾಡಿ ದನಗಳನ್ನು ಖರೀದಿ ಮಾಡುತ್ತಿದ್ದು, ಗೋವುಕಳ್ಳರು ಅಂತಹ ದನಗಳನ್ನೇ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಘಟನೆಯು ಮೂಡಬಿದಿರೆ ಪರಿಸರದಲ್ಲಿ ನಡೆಯುತ್ತಿದೆ.

ಮೂಡುಬಿದಿರೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತಿರುವ ವಿಚಾರವು ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಅಕ್ರಮ ಗೋವುಗಳ ಕಳ್ಳಸಾಗಾಣಿಗೆ ಮತ್ತು ಅಕ್ರಮ ಕಸಾಯಿಖಾನೆ ನಡೆಸುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ಧರಗುಡ್ಡೆ, ತಾಲೂಕು ಸಂಯೋಜಕ ಸಂದೀಪ್ ಹೆಗ್ಡೆ, ತಾಲೂಕು ಪ್ರಮುಖರಾದ ಅನೂಜ್ ಭಂಡಾರಿ, ನಿತೇಶ್ ಎಸ್. ಪೂಜಾರಿ ಉಪಸ್ಥಿತರಿದ್ದರು.