Saturday, January 25, 2025
ಸುದ್ದಿ

ಕುಂದಾಪುರ: ಮೇಣದ ಬತ್ತಿಯು ಆಕಸ್ಮಿಕವಾಗಿ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು – ಕಹಳೆ ನ್ಯೂಸ್

ಕುಂದಾಪುರ: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಮೊಂತಿ ಪಿರೇರಾ(76) ಎಂದು ಗುರುತಿಸಲಾಗಿದೆ.

ಅ.8ರಂದು ರಾತ್ರಿ ಮನೆಯಲ್ಲಿ ಕರೆಂಟ್ ಹೋದ ಕಾರಣ ಮೇಣದ ಬತ್ತಿ ಹಚ್ಚಿ ಟೇಬಲ್ ಮೇಲಿಟ್ಟು ಮೊಂತಿ ಪಿರೇರಾ ಊಟ ಮಾಡುತ್ತಿದ್ದರು. ಈ ವೇಳೆ ಮೇಣದ ಬತ್ತಿಯು ಆಕಸ್ಮಿಕವಾಗಿ ಮೈಮೇಲೆ ಬಿದ್ದು ಮೊಂತಿ ಪಿರೇರಾ ಧರಿಸಿದ ನೈಟಿಗೆ ಬೆಂಕಿ ತಗುಲಿ ಸುಟ್ಟ ಗಾಯವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಭೀರ ಸ್ಥಿತಿಯಲ್ಲಿದ್ದ ಇವರು, ಅ.22ರಂದು ನಸುಕಿನ ವೇಳೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾಯಾಗದೆ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು