Sunday, January 26, 2025
ಸುದ್ದಿ

ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಎನ್.ಎಂ.ಪಿ.ಎ ಬಂದರಿನ ಭದ್ರತಾ ಪಿಎಸ್ ಐ – ಕಹಳೆ ನ್ಯೂಸ್

ಮಂಗಳೂರು : ಪಣಂಬೂರು ಎನ್.ಎಂ.ಪಿ.ಎ ಬಂದರಿನಲ್ಲಿ ಭದ್ರತೆ ನೋಡಿಕೊಳ್ಳುವ ಸಿಐಎಸ್ ಎಫ್ ವಿಭಾಗದಲ್ಲಿ ಪಿಎಸ್ ಐ ಆಗಿದ್ದ ಜಾಕೀರ್ ಹುಸೇನ್ (58) ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಕೀರ್ ಹುಸೇನ್ ಮೂಲತಃ ರಾಯಚೂರು ಜಿಲ್ಲೆಯ ನಿವಾಸಿಯಾಗಿದ್ದು, ಎನ್ ಎಂಪಿಟಿ ಮೈನ್ ಗೇಟ್ ನಲ್ಲಿ ನೈಟ್ ಶಿಫ್ಟ್ ನಲ್ಲಿ ನಿಯೋಜಿತರಾಗಿದ್ದರು. ನಿನ್ನೆ ಬೆಳಗ್ಗೆ 6.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಬೇರೊಬ್ಬರಿಗೆ ಕೆಲಸ ವಹಿಸಿ ವಾಶ್ ರೂಮ್ ತೆರಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲಿ ಇರುವಾಗಲೇ ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ತಲೆಗೆ ಗುರಿ ಇರಿಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.