Saturday, February 1, 2025
ಸುದ್ದಿ

ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ತೆನೆ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ನವರಾತ್ರಿಯ ವಿಜಯದಶಮಿಯ ಕೊನೆಯ ದಿನದಂದು ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ತೆನೆ ಹಬ್ಬದ ಪ್ರಯುಕ್ತ, ಭಕ್ತರಿಗೆ ತೆನೆ ವಿತರಿಸುವ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ತೆನೆಗೆ ಪೂಜೆ ಸಲ್ಲಿಸಿ ಬಳಿಕ ಬತ್ತವನ್ನು ಕೊಯ್ಯಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಯ್ದ ತೆನೆಯನ್ನು ತೆರೆದ ವಾಹನದ ಮೂಲಕ ದೇವಾಲಯಕ್ಕೆ ತಂದು, ದೇವರ ಮುಂದೆ ತೆನೆಯನ್ನು ಇರಿಸಿ ಪೂಜೆ ಸಲ್ಲಿಸಿ ಆ ಬಳಿಕ ತೆನೆಯನ್ನು ಕಟ್ಟಿದರು. ದೇವಸ್ಥಾನದಲ್ಲಿ ತೆನೆ ತುಂಬಿಸಿದ ಬಳಿಕ ಭಕ್ತರಿಗೆ ತೆನೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು