ಚಿಕ್ಕಮಗಳೂರು: ಆಧುನಿಕ ಜಗತ್ತು ಹಾಗೂ ಯುವಜನತೆ ಎಷ್ಟು ಕೆಟ್ಟಿದ್ದಾರಂದ್ರೆ ಮೈಬಗ್ಗಿಸಿ ದುಡಿಯೋಲ್ಲ ಆದ್ರೆ, ಬಯಸಿದ್ದೆಲ್ಲಾ ಬೇಕು. ಅದಕ್ಕಾಗಿ ಕೊಲೆ ಬೇಕಾದ್ರು ಮಾಡ್ತಾರೆ. ಅವನ ವಯಸ್ಸು ಇನ್ನೂ 19. ಓದುತ್ತಿರೋದು ಪಿಯುಸಿ. ಮಾಡ್ತಿರೋದು ಪೇಪರ್ ಹಾಕೋ ಕೆಲಸ. ಪೇಪರ್ ಹಾಕೋಕೆ ಹೋಗುವಾಗ ಎದುರಿಗೆ ಬಂದ ಬೈಕ್ಗೆ ಕೈಹೊಡ್ದ. ಅಣ್ಣಾ… ಅಲ್ಲಿ ತನ್ಕ ಡ್ರಾಪ್ ಪ್ಲೀಸ್ ಅಂದ. ಪಾಪ ಹುಡ್ಗ ಅಂತ ಆತ ಬೈಕ್ ಹತ್ತಿಸಿಕೊಂಡ. ಬೈಕ್ ಓಡಿಸ್ತಿದ್ದೋನು ಫೋನ್ ಬಂತೆಂದು ಬೈಕ್ ನಿಲ್ಲಿಸಿದ್ದೆ ತಡ, ಚಿಗುರುಮೀಸೆ ಹುಡ್ಗ ಅಲ್ಲೆ ಬಿದ್ದಿದ್ದ ದೊಣ್ಣೆಯಲ್ಲಿ ಹೊಡೆದು ಅವ್ನ ಕೊಂದೇ ಬಿಟ್ಟ. ಅಸಲಿಗೆ ಇಬ್ಬರಿಗೂ ಸಂಬಂಧವೇ ಇಲ್ಲ. ಆದ್ರು, ಕೊಲೆ ಮಾಡ್ದ. ಆದ್ರೆ, ಕಾರಣ ಮಾತ್ರ ವಿಚಿತ್ರ. ವಿಸ್ಮಯ… ಅದೇನೆಂತ ಕನ್ಪರ್ಮ್ ಮಾಡೋಕೆ ಈ ಸ್ಟೋರಿ ನೊಡಿ..
ಅಂದು ಅಕ್ಟೋಬರ್ 5. ಬೆಳಗ್ಗಿನ ಜಾವ 6.30. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರಿನ ಮೋಹನ್ ಪೂಜೆಗೆಂದು ಬೇವಿನ ಸೊಪ್ಪು ತರಲು ಹೋಗ್ತಿದ್ರು. ತರೀಕೆರೆಯಿಂದ ಬೆಳಗ್ಗಿನ ಜಾವ 4ಕ್ಕೆ ಬಂದು ಕಾದು ಕೂತಿದ್ದ 19 ವರ್ಷದ ಶಿವರಾಜ್, ಟಿವಿಎಸ್ ಎಕ್ಸೆಲ್ ಬೈಕ್ ಕಂಡೊಡನೆ, ಅಣ್ಣಾ ಪಕ್ಕದ ತೋಟಕ್ಕೆ ಕೆಲಸ ಹೋಗ್ತಿದ್ದೇನೆ, ಅಲ್ಲಿವರ್ಗೂ ಬಿಡಿ ಎಂದು ಬೈಕ್ ಹತ್ತಿದ್ದಾನೆ. ಮಾರ್ಗ ಮಧ್ಯೆ ಮೋಹನ್ ಫೋನ್ಗಾಗಿ ಬೈಕ್ ನಿಲ್ಲಿಸಿದ ಕೂಡಲೇ ಶಿವರಾಜ್ ಪಕ್ಕದಲ್ಲೇ ಬಿದ್ದಿದ್ದ ದೊಣ್ಣೆಯಿಂದ ಹೊಡೆದು ಸಾಯಿಸಿ, ಟಿವಿಎಸ್ ಎಕ್ಸೆಲ್ ಬೈಕ್ ಹಾಗೂ ಮೊಬೈಲ್ನೊಂದಿಗೆ ಪರಾರಿಯಾಗಿದ್ದಾನೆ. ಯಾಕಂದ್ರೆ, ಶಿವರಾಜ್ಗೆ ಟಿವಿಎಸ್ ಎಕ್ಸೆಲ್ ಬೈಕ್ ಅಂದ್ರೆ ಭಾರೀ ಪ್ರೀತಿ. ಅದಕ್ಕಾಗಿ ಕೊಲೆ ಮಾಡಿ ಬೈಕ್ ಹೊತ್ತೊಯ್ದಿದ್ದ. ಆದ್ರೆ ಇಂದು ಪೊಲೀಸರ ಅತಿಥಿಯಾಗಿ ಕಂಬಿ ಎಣಿಸ್ತಿದ್ದಾನೆ. ಶಿವರಾಜ್, ಮೃತದೇಹವನ್ನ ಗಿಡಘಂಟೆಯೊಳಗೆ ಎಳೆದೊಯ್ತಿರೋ ಸಿಸಿಟಿವಿ ಫುಟೇಜ್ ಕೂಡ ಪೊಲೀಸರಿಗೆ ಸಿಕ್ಕಿದೆ.
ಹೌದು.. ಆರೋಪಿ ಶಿವರಾಜ್‌ಗೆ ಟಿವಿಎಸ್ ಎಕ್ಸೆಲ್ ಗಾಡಿ ಅಂದ್ರೆ ಸಖತ್ ಇಷ್ಟ. ಪೇಪರ್ ಹಾಕಿ ಸೊಪ್ಪಿನ ವ್ಯಾಪಾರ ಮಾಡ್ತಿದ್ದ ಶಿವರಾಜ್ಗೆ ಟಿವಿಎಸ್ ಎಕ್ಸಲ್ ಗಾಡಿ ತೆಗೆದುಕೊಳ್ಳಲೇ ಬೇಕೆಂದು ಹಠವಿತ್ತು. ಅದಕ್ಕಾಗಿ ಬೀರೂರಿನ ನಿರ್ಜನ ಪ್ರದೇಶದಲ್ಲಿ ಯಾರಾದ್ರೂ ಟಿವಿಎಸ್ ಗಾಡಿ ಓಡಿಸ್ತಿದ್ರೆ ಕದಿಯೋಕೆಂದು ಹೊಂಚು ಹಾಕಿದ್ದಾನೆ. ಕೊನೆಗೆ, 3 ದಿನಗಳ ಕಾಲ ಮೋಹನ್ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಗೈದಿದ್ದಾನೆ. ಅಂದು ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಸಮೀಪದ ತೋಟವೊಂದರಲ್ಲಿದ್ದ ಸಿಸಿಟಿವಿ ನೋಡಿದಾಗ ಓರ್ವ ಮತ್ತೋರ್ವನನ್ನ ಎಳೆದಾಡ್ತಿರೋ ದೃಶ್ಯ ಕಂಡಿತ್ತು. ಪೊಲೀಸರು ವಾಟ್ಸಾಪ್ ಗ್ರೂಪಲ್ಲಿ ಗಾಡಿ ಕಳುವಾಗಿರೋ ಬಗ್ಗೆ ಮೆಸೇಜ್ ಹಾಕ್ತಾರೆ. 2 ದಿನಗಳ ಬಳಿಕ ಶಿವರಾಜ್ ಭದ್ರಾವತಿಯಲ್ಲಿ ಮಾರಿ ಬೇರೆ ಗಾಡಿ ಖರೀದಿಸೋಣೆಂದು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಒಟ್ಟಾರೆ, ಚಿಗುರುಮೀಸೆ ಯುವಕನ ಟಿವಿಎಸ್ ಎಸ್ ಎಲ್ ಹೆವಿ ಡ್ಯೂಟಿ ಶೋಕಿಗೆ ಬಲಿಯಾಗಿದ್ದು ಮಾತ್ರ ಎರಡು ಮಕ್ಕಳ ಅಮಾಯಕ ತಂದೆ. ಕೆಲಸ ಮಾಡ್ಕೊಂಡು ಪಿಯುಸಿ ಓದ್ತಿರೋ ಯುವಕ ಶೋಕಿಗಾಗಿ ಹತ್ಯೆ ಮಾಡ್ತಾನಂದ್ರೆ ಆಧುನಿಕ ಜಗತ್ತು ಬದುಕನ್ನ ಏನೆಂದುಕೊಂಡಿದೆ ಎಂದು ಯೋಚಿಸಬೇಕಾಗಿದೆ. ಜೊತೆಗೆ, 19 ವರ್ಷದ ಯುವಕ ಬೈಕ್ಗಾಗಿ ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದು ಪೊಲೀಸರಿಗೆ ಹಾಗೂ ನಾಗರೀಕರಲ್ಲಿ ಅಚ್ಚರಿ ತಂದಿದೆ.
ಶಿವಕುಮಾರ್ ಚಿಕ್ಕಮಗಳೂರು ಕಹಳೆ ನ್ಯೂಸ್