Saturday, February 1, 2025
ಸುದ್ದಿ

ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಮುತ್ತಿನ ಹಾರವನ್ನು ವಾರಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಚರುಂಮುರಿ ವ್ಯಾಪಾರಸ್ಥ – ಕಹಳೆ ನ್ಯೂಸ್

ಬಂಟ್ವಾಳ : ರಸ್ತೆಯಲ್ಲಿ ಸಿಕ್ಕಿದ ಚಿನ್ನದ ಮುತ್ತಿನ ಹಾರವನ್ನು ಕಳೆದುಕೊಂಡ ಕುಟುಂಬಕ್ಕೆ ಹಸ್ತಾಂತರಿಸಿ, ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಇದರ ಹಿರಿಯ ಸದಸ್ಯರಾದ ಉಮೇಶ್ ಆಚಾರ್ಯ ಬಂಟ್ವಾಳ ಇವರು ಮಾನವೀಯತೆ ಮೆರೆದಿದ್ದಾರೆ.

ಸನಾತನ ಹಿಂದೂ ಜಾತ್ರೆ ವ್ಯಾಪಾರಸ್ಥ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಇದರ ಹಿರಿಯ ಸದಸ್ಯರಾದ ಉಮೇಶ್ ಆಚಾರ್ಯ ಬಂಟ್ವಾಳ ಇವರು ಪಾಣೆಮಂಗಳೂರು ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಚರ್ಮುರಿ ಮಾಡುವಾಗ ರಸ್ತೆಯಲ್ಲಿ ಬಿದ್ದು ಎರಡುವರೆ ಪವನಿನ ಚಿನ್ನದ ಮುತ್ತಿನ ಹಾರ ಸಿಕ್ಕಿದೆ. ಅದನ್ನು ಇಂದು ಮಧ್ಯಾಹ್ನ 1.ಗಂಟೆಗೆ ಆಡಳಿತ ಕಮಿಟಿಯ ಮತ್ತು ನಮ್ಮ ಸಂಘದ ಸದಸ್ಯರಾದ ಸತೀಶ್ ಪಾಣೆಮಂಗಳೂರು ಪ್ರಸಾದ್ ಬಂಟ್ವಾಳ ಸತೀಶ್ ಬಿಸಿರೋಡ್ ಮತ್ತು ಸಂಘದ ಜಿಲ್ಲಾಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್ ಕಲ್ಲಡ್ಕ ಇವರ ಉಪಸ್ಥಿತಿಯಲ್ಲಿ ಚಿನ್ನ ಕಳೆದು ಹೋದ ಪಾರ್ಟಿಗೆ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು