Wednesday, November 27, 2024
ಸುದ್ದಿ

ಪಡಿತರ ಚೀಟಿದಾರರಿಗೆ `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ – ಕಹಳೆ ನ್ಯೂಸ್

ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಮಾಡಿದೆ.


ಆಹಾರ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಸರ್ವರ್ ಸಮಸ್ಯೆಯಿಂದ ಬಹುತೇಕ ಪಡಿತರ ಕಾರ್ಡ್ ಗಳ ತಿದ್ದುಪಡಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 1 ರಿಂದ ಮತ್ತೊಮ್ಮೆ ಪಡಿತರ ಚೀಟಿಗಳ ತಿದ್ದುಪಡಿಗೆ ಅವಕಾಶ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಡಿತರ ಚೀಟಿಯಲ್ಲಿ ಹೆಸರು ತಪ್ಪಾಗಿದ್ದರೆ ಸರಿಪಡಿಸುವುದು, ಹೊಸ ಹೆಸರುಗಳು ಸೇರ್ಪಡೆ, ವಿಳಾಸ ಬದಲಾವಣೆ, ಪಡಿತರ ಚಿಟಿಗಳಲ್ಲಿನ ಕುಟುಂಬದ ಸದಸ್ಯರ ಹೆಸರು ತೆಗೆದು ಹಾಕುವುದು ಮೊದಲಾದ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಆಹಾರ ಇಲಾಖೆಯು ನವೆಂಬರ್ 1 ರಿಂದ ಮತ್ತೊಮ್ಮೆ ಅವಕಾಶ ನೀಡಲು ಮುಂದಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು