Recent Posts

Monday, January 20, 2025
ಸುದ್ದಿ

ಸುಬ್ರಹ್ಮಣ್ಯದ ತುರ್ತು ಸೇವಾ ವಾಹನದ ಅವ್ಯವಸ್ಥೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಹ್ಮಣ್ಯ ಇತಿಹಾಸ ಪ್ರಸಿದ್ದ ಯಾತ್ರಾ ಸ್ಥಳ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬಂದಂತಹ ಭಕ್ತರಿಗೆ ಹಾಗು ಸುಬ್ರಹ್ಮಣ್ಯದ ಜನತೆಗೆ ಅರೋಗ್ಯ ಸೇವೆ ನೀಡುವ ಏಕೈಕ ತುರ್ತು ಸೇವಾ ವಾಹನಕ್ಕೆ ಈಗ ಚಿಕಿತ್ಸೆಯ ಅನಿವಾರ್ಯತೆ ಇದೆ.

ಸರ್ಕಾರ ನಿಡಿರೋ 108 ವಾಹನದ ಸ್ಥಿತಿ ಹೇಗಿದೆ ಎಂದ್ರೆ 3 ಟಯರ್‌ಗಳು ಸಂಪೂರ್ಣ ಸವೆದು ಹೋಗಿ ಟಯರ್ ಒಳಗಿನ ಸರಿಗೆ ಕಾಣುತ್ತಿದೆ. ವಾಹನಕ್ಕಾಗಿ ಕರೆ ಮಾಡಿದರೆ ಸುಬ್ರಹ್ಮಣ್ಯದ ವಾಹನದಲ್ಲಿ ವೈದ್ಯರಿಲ್ಲ ಎಂದು ಹೇಳ್ತಾರೆ. ವಾಹನದ ವ್ಯವಸ್ಥೆಗಾಗಿ ಮನವಿ ನೀಡಿದರೆ ಸುಳ್ಯದಿಂದ ಬರುತ್ತೆ, ಅದು ನಿಮ್ಮನ್ನು ಸುಳ್ಯದ ಆಸ್ಪತ್ರೆಗೆ ತಲುಪಿಸುತ್ತೆ ಎಂಬ ಉಡಾಫೆಯ ಉತ್ತರ ಬೇರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಅನಾರೋಗ್ಯ ಪೀಡಿತ ಸಮಯದಲ್ಲಿ ಜನರು ಪರದಾಡೊ ಪರಿಸ್ಥಿತಿ ಒದಗಿ ಬಂದಿದೆ. ಅದೇನೇ ಇರ‍್ಲಿ ಪ್ರವಾಸಿ ಕ್ಷೇತ್ರವಾಗಿರುವ ಸುಬ್ರಹ್ಮಣ್ಯಕ್ಕೆ 108 ವಾಹನವು ಅತಿ ಅವಶ್ಯವಾಗಿದ್ದು ಅತಿ ವೇಗವಾಗಿ ವಾಹನವನ್ನು ಒದಗಿಸಿ ಎಂಬುದು ಜನತೆಯ ಆಶಯ.