Recent Posts

Sunday, January 19, 2025
ಸುದ್ದಿ

Exclusive : ಶ್ಯಾಮ್ ಭಟ್ ತೇಜೋವಧೆಗೆ ವ್ಯವಸ್ಥಿತ ಸಂಚು ; ಹಳೇ ಸುಳ್ಳು ಪ್ರಕರಣದ ವಿಡಿಯೋ ವೈರಲ್ – ಕಹಳೆ ನ್ಯೂಸ್

ಬೆಂಗಳೂರು : ಶ್ಯಾಂ ಭಟ್ ಎಕ್ಸ್ ಕ್ಲ್ಯೂಸಿವ್ ಹೇಳಿಕೆ
ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಬೋಕರ್ ಅಶ್ವತ್ಥ ಗೌಡ ಈಗಾಗಲೇ ಪೋಲಿಸ್ ಠಾಣೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ‌.

ಇದು ಸ್ಪಷ್ಟವಾಗಿ ಶ್ಯಾಮ್ ಭಟ್ ತೇಜೋವಧೆಗೆ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ. 2015 ರಲ್ಲಿ ನಡೆದ ಪ್ರಕರಣವನ್ನು ಈಗ ಮತ್ತೆ ಸುಳ್ಳು ರೀತಿಯಲ್ಲಿ ಬಿಂಬಿಸಲಾಗುತ್ತಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಅಶ್ವತ್ಥಗೌಡ ಒಬ್ಬ ಬ್ರೋಕರ್.
ಆತ ಆಗಾಗ ಬಂದು ನನ್ನನ್ನು ಪೀಡಿಸುತ್ತಿದ್ದ. ಘಟನೆ ನಡೆದ ದಿನದಂದು ಕೂಡ ನನ್ನನ್ನು ಪೀಡಿಸಲೆಂದೇ ಬಂದಿದ್ದ. ಆತನಿಂದ ತಪ್ಪಿಸಿಕೊಳ್ಳಲು ನಾನು ಹಾಗೆ ಮಾತ್ನಾಡ್ಬೇಕಾಯ್ತು. ಆತನ ಮಾನಸಿಕ ಸ್ವಾಸ್ಥ್ಯ ಸರಿಯಾಗಿಲ್ಲ.
ಆತ ನೀಡುತ್ತಿದ್ದ ಮಾನಸಿಕ ಹಿಂಸೆ ಬಗ್ಗೆ 2015 ರಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಕಹಳೆ ನ್ಯೂಸ್ ಗೆ ಶ್ಯಾಮ್ ಭಟ್ ಹೇಳಿಕೆ ನೀಡಿದ್ದಾರೆ‌‌‌ .

ಜಾಹೀರಾತು
ಜಾಹೀರಾತು
ಜಾಹೀರಾತು