Monday, January 20, 2025
ಸುದ್ದಿ

ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ – ಕಹಳೆ ನ್ಯೂಸ್

ಪುತ್ತೂರು, :  ಬೆಂಗಳೂರಿನ ರಾಮಮೂರ್ತಿ ನಗರದ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಕ್ಟೋಬರ್ 26 ರಿಂದ 31ರ ವರೆಗೆ ನಡೆಯುತ್ತಿರುವ ರಾಷ್ಟ್ರಮಟ್ಟದ ಅಂಡರ್-19 ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಎಸ್‌ಜಿಎಫ್‌ಐ( ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ) ಗೆ ಆಯ್ಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶರತ್ ಶೆಟ್ಟಿ ಮೋಕ್ಷಿತ್ ಪಿ ಶೆಟ್ಟಿ, ಕೌಶಿಕ್, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪ್ರಜ್ವಲ್, ಗಗನ್, ಪ್ರಜ್ವಲ್, ಕಲಾ ವಿಭಾಗದ ಶಮಿತ್ ಪ್ರಸಾದ್ ಪಿ, ವಿಜ್ಞಾನ ವಿಭಾಗದ ರೋಶಿತ್ ಆರ್, ಲಕ್ಷಿö್ಮÃದಾಸ್ ಎನ್, ಭಾರ್ಗವ್ ಎಸ್ ಭಾಗವಹಿಸಿದ್ದರು. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹಂಸಿನಿ, ಶಿವಾನಿ, ವಾಣಿಜ್ಯ ವಿಭಾಗದ ಶ್ರೇಯಾ, ಮಾನ್ಯ ಶೆಟ್ಟಿ, ವರ್ಷಿಣಿ, ತೃಪ್ತಿ ಕೆ, ಕಲಾ ವಿಭಾಗದ ಕೀರ್ತಿಲತಾ ಬಿ ಎಲ್, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಮಿಥಾಲಿ, ಹಿತೈಷಿ ಬಿ ಕೆ, ಜಸ್ಮಿತಾ, ವಿಜ್ಞಾನ ವಿಭಾಗದ ಪ್ರತೀಕ್ಷಾ ಎಂ, ಸಾತ್ವಿ ಬಿ ಕೆ ಭಾಗವಹಿಸಿದ್ದರು. ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.