Tuesday, January 21, 2025
ಸುದ್ದಿ

ಬಂಟ್ವಾಳ : ಮನೆಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ಮತ್ತು ನಗದು ಕಳವು – ಕಹಳೆ ನ್ಯೂಸ್

ಬಂಟ್ವಾಳ: ಮನೆಯ ಬೀಗ ತೆಗೆದು ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ಮತ್ತು ನಗದು ಕಳ್ಳತನ ಮಾಡಿದ ಘಟನೆ ಬಂಟ್ವಾಳ ನಗರ ಪೆÇೀಲೀಸ್ ಠಾಣಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಬಿಸಿರೋಡಿನಲ್ಲಿ ನಡೆದಿದೆ.

ವೀಕ್ಷಿತ್ ಎಂಬವರ ಮನೆಯಿಂದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ನಗದು ಕಳವು ನಡೆದಿದೆ ಎಂದು ದೂರು ನೀಡಿದ್ದಾರೆ.
ಬಿಸಿರೋಡಿನ ಗ್ಯಾಲಕ್ಸಿ ಅಪಾಟ್ಮೆರ್ಂಟ್ ನಲ್ಲಿ ವಾಸವಾಗಿರುವ ಇವರು ಬೆಳಿಗ್ಗೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಾಗಿಲ ಸಮೀಪ ಇಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಸೋಪಾದ ಮೇಲೆ ಕೀ ಬಿದ್ದುಕೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯ ಒಳಗೆ ಹೋಗಿ ನೋಡಿದಾಗ ಗಾಡ್ರೆಜ್ ಬಾಗಿಲು ತೆರದಿತ್ತು. ಅದರಲ್ಲಿ ಇರಿಸಲಾಗಿದ್ದ 67 ಗ್ರಾಂ ತೂಕದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನ ಹಾಗೂ 5 ಸಾವಿರ ರೂ ನಗದನ್ನು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.