Recent Posts

Monday, January 20, 2025
ಸುದ್ದಿ

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ -ಉಪನ್ಯಾಸಕರ ಕಾರ್ಯಾಗಾರ – ಕಹಳೆ ನ್ಯೂಸ್

ಮೂಡುಬಿದಿರೆ: ಶಿಕ್ಷಣ ಅಂದ್ರೆ ಜ್ಞಾನ, ಕೌಶಲ್ಯ, ಸೃಜನಶೀಲತೆ ಸಮಸ್ಯೆ ನಿವಾರಣೆ, ಮೌಲ್ಯಗಳು ಎಂದು ಹೇಳಬಹುದು. ಪ್ರತಿಯೊಂದು ಮಗುವಿಗೂ ನಿಜವಾದ ಪಾಠ ಶಾಲೆ ಮನೆಯೇ ಆಗಿರುತ್ತದೆ. ಅಲ್ಲಿ ತಾಯಿಯೇ ಮೊದಲು ಗುರುವಾಗುತ್ತಾಳೆ. ಇನ್ನು ಶಾಲೆಗಳಲ್ಲಿ ಕಲಿಯಬೇಕು ಎಂಬ ಹಂಬಲ ವಿದ್ಯಾರ್ಥಿಗಳಲ್ಲಿ ಬರುವಂತಹ ಪರಿಸರವನ್ನು ಅಧ್ಯಾಪಕನಾದವನು ಒದಗಿಸಬೇಕು. ಶಿಕ್ಷಣ ಪರಿಪೂರ್ಣವಾಗಬೇಕಾದರೆ ವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು ಪ್ರಯತ್ನಿಸಬೇಕು. ಈ ನಿಟ್ತಿನಲ್ಲಿ ಮಕ್ಕಳಲ್ಲಿ ಒಂಭತ್ತು ವಿಧದ ಜನ್ಮದತ್ತ ಪ್ರತಿಭೆಗಳಿರುತ್ತವೆ. ಅದನ್ನು ಗುರುತಿಸಿ ಉತ್ತಮ ಮಾರ್ಗದರ್ಶನ ನೀಡುವುದು ಅಧ್ಯಾಪಕನ ಕರ್ತವ್ಯವಾಗಬೇಕು. ಮಕ್ಕಳ ಆಸಕ್ತಿ ಕ್ಷೇತ್ರವನ್ನು ಗಮನಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವನ್ನು ನೀಡುವವರು ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬಾರದು ಹಣಕ್ಕಾಗಿ ಯಾವತ್ತೂ ಪಾಠವನ್ನು ಹೇಳಬಾರದು ಅದು ಸೇವೆಯಾಗಬೇಕು.


ಎಲ್ಲಿ ವೃತ್ತಿಗೆ ಹಣ ಆಮೀಷವಾಗುತ್ತದೆಯೋ ಅಲ್ಲಿ ವ್ಯಾಪಾರೀಕರಣವಾಗುತ್ತದೆ. ಸಮಚಿತ್ತ, ಅದಮ್ಯಾ ಒಲವು, ಅನ್ವೇಷಣಾ ಮನೋಭಾವ , ಸಮರ್ಪಕ ಸಂವಹನ ಸಾಮಥ್ರ್ಯ, ನಿರಂತರ ಕಲಿಕೆ , ಸೃಜನಶೀಲತೆ, ತಾಳ್ಮೆಯಿಂದ ಆಲಿಸುವಿಕೆ, ನಿತ್ಯ ಪೂರ್ವ ಸಿದ್ಧತೆ , ಸಹಾನುಭೂತಿಯ ನಾಯಕತ್ವ, ವಿಜ್ಞಾನ ವಿಶೇಷಗಳ ಪ್ರಾಥಮಿಕ ತಿಳುವಳಿಕೆಯನ್ನು ಅಧ್ಯಾಪಕನಾದವನು ಹೊಂದಿರಬೇಕೆಂದು ಚಂದನ ವಾಹಿನಿಯ “ಥಟ್ ಅಂತ ಹೇಳಿ” ಖ್ಯಾತಿಯ ಡಾ.ನಾ. ಸೋಮೇಶ್ವರ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ, ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ -ಉಪನ್ಯಾಸಕರ ಕಾರ್ಯಾಗಾರದಲ್ಲಿ ಉತ್ತಮ ಅಧ್ಯಾಪಕರಿಗೆ ಇರಬೇಕಾದ ಲಕ್ಷಣಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಭಟ್ , ಸೆಂಟ್ರಲ್ ಶಾಲೆಯ ಪ್ರಾಂಶುಪಾಲೆ ದಿವ್ಯಾ ಬಾಳಿಗ ಹಾಗೂ ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕ ರಂಜಿತ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು