Recent Posts

Monday, January 20, 2025
ಸುದ್ದಿ

ಮೂಡುಬಿದಿರೆ : ದ.ಕ ಜಿಲ್ಲಾಮಟ್ಟದ ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ– ಕಹಳೆ ನ್ಯೂಸ್

ಮೂಡುಬಿದಿರೆ: ದ.ಕ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇವುಗಳ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಸ್ವರಾಜ್ಯ ಮೈದಾನದಲ್ಲಿ ನಡೆಯುವ ದ.ಕ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಸಾಮರ್ಥ್ಯದ ಮಕ್ಕಳ ಕ್ರೀಡಾಕೂಟ ಆರಂಭಗೊಂಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸಾಧಕ ಕ್ರೀಡಾಪಟುಗಳಿಗೆ ನಗದು ನೀಡಿ ಪುರಸ್ಕರಿಸುವ ವ್ಯವಸ್ಥೆಯನ್ನು ಸರಕಾರ ಜಾರಿ ಮಾಡಿದಾಗ ಕ್ರೀಡಾಪಟುಗಳಿಗೆ ನಿಜಾವಾದ ಪ್ರೋತ್ಸಾಹ ಸಿಕ್ಕಂತ್ತಾಗುತ್ತದೆ. ವಿದ್ಯಾರ್ಥಿಗಳು ನಿರಂತರ ಪರಿಶ್ರಮಪಟ್ಟು ಜಿಲ್ಲಾ ಮಟ್ಟದಿಂದ ರಾಜ್ಯ ನಂತರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ವಿಶೇಷ ಸಾಧನೆ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಉತ್ತುಂಗಕ್ಕೇರಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಹೋಬಳಿ ಕೇಂದ್ರವೊಂದಕ್ಕೆ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ಮಂಜೂರಾಗಿದ್ದರೆ ಮೂಡುಬಿದಿರೆಗೆ ಮಾತ್ರ. ಇಲ್ಲಿಂದ ಇನ್ನಷ್ಟು ಸಾಧಕ ಕ್ರೀಡಾಪಟುಗಳು ಮೂಡಿಬರಲಿ ಎಂದು ಹಾರೈಸಿದರು. ಎಂಎಲ್‌ಸಿ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡುವ ಕ್ರೀಡಾಪಟುಗಳನ್ನು ಪ್ರಾಥಮಿಕ ಹಂತದಲ್ಲೆ ತಯಾರು ಮಾಡಬೇಕಾಗಿದೆ ಎಂದ ಅವರು

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯರ್ಥವಾಗುತ್ತಿರುವುದರಿಂದ ಜನಪ್ರತಿನಿಧಿಗಳು ಮತ್ತು ಸರಕಾರ ಶಿಷ್ಟಾಚಾರ ನಿಯಮಗಳ ಬದಲಾವಣೆ ಬಗ್ಗೆ ಆಲೋಚಿಸಬೇಕಾಗಿದೆ. ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಡೆಯುವಾಗ ಆಯಾಯ ವ್ಯಾಪ್ತಿಗೆ ಸೀಮಿತವಾಗಿ ಶಿಷ್ಟಾಚಾರ ನಿಯಮ ಇರಬೇಕು. ಇದರಿಂದ ಸಮಯವು ಉಳಿಯುತ್ತದೆ. ಸಮಾರಂಭದಲ್ಲಿ ಮಂತ್ರಿ, ಶಾಸಕರು ಸಹಿತ ಬಹುತೇಕ ಆಹ್ವಾನಿತ ಜನಪ್ರತಿನಿಧಿಗಳು ಗೈರಾಗಿರುವುದನ್ನು ಗಮನಿಸಿ ತಮ್ಮ ಭಾಷಣದಲ್ಲಿ ಶಿಷ್ಟಾಚಾರದಲ್ಲಿ ಬದಲಾವಣೆಯ ಅಗತ್ಯತೆಯನ್ನು ವಿವರಿಸಿದರು. ರೋಟರಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಂತಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಕ್ರೀಡಾಪಟುಗಳ ಪಥಸಂಚಲನವನ್ನು ಸ್ವೀಕರಿಸಿದರು. ಮಂಗಳೂರು ಕೆ.ಎಂ.ಎಫ್ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇದರ ಸಹನಿರ್ದೇಶಕರಾದ ಸಿಪ್ರಿಯನ್ ಮೊಂತೆರೊ, ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಕೆ., ರೋಟರಿ ಪ.ಪೂ ಕಾಲೇಜಿನ ಸಂಚಾಲಕ ಜಯಪ್ರಕಾಶ್ ಪಿಂಟೊ, ಪ್ರಾಂಶುಪಾಲ ಪ್ರವೀಣ್,ರೋಟರಿ ಅಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಧ್ಯಾಯಿನಿ ತಿಲಕ ಅನಂತವೀರ ಜೈನ್, ಸಿಬಿಎಸ್ ವಿಭಾಗದ ಮುಖ್ಯ ಶಿಕ್ಷಕಿ ರೂಪಾ ಮಸ್ಕರೇನಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷನಾಧಿಕಾರಿ ನಿತ್ಯಾನಂದ ಶೆಟ್ಟಿ, ದೈಹಿಕ ಶಿಕ್ಷಕ ಸುಧೀರ್ ಕುಮಾರ್, ಭಾರತ್ ಅಟೋ ಕಾರ್‌ನ ಸುಜ್ಞಾನ್ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಅಂಗ್ಲ ಮಾಧ್ಯಮ ಸಂಚಾಲಕ ಪ್ರವೀಣ್‌ಚಂದ್ರ ಜೈನ್ ಸ್ವಾಗತಿಸಿದರು. ರಾಷ್ಟ್ರೀಯ ಕ್ರೀಡಾಪಟು ಅಮೀನಾ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ನವೀನ್ ಅಂಬೂರಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ವಂದಿಸಿದರು.